ಬೆಂಗಳೂರು: ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಹೆಚ್.ಕೆ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
Advertisement
ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಪರವಾಗಿ, ಬಿಜೆಪಿ ನಾಯಕರ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಅವರು, ಆರ್‌ಎಸ್‌ಎಸ್ ಬಗ್ಗೆ ನೀಡಿದ ಹೇಳಿಕೆಯಿಂದ ನೀವೆಲ್ಲರೂ ಮೈಪರಚಿಕೊಳ್ಳುತ್ತಿರುವುದು ನೋಡಿದರೆ ಸತ್ಯ ಎಷ್ಟು ಕಹಿಯಾಗಿರುತ್ತದೆ ಎಂಬುದು ಅರ್ಥವಾಗುತ್ತದೆ. ಕಟೀಲ್ ಅವರು ಟೀಕೆ ಮಾಡುವ ಭರದಲ್ಲಿ ‘ಫ್ಯಾಮಿಲಿ ಬ್ಯುಸಿನೆಸ್’ ಬಗ್ಗೆ ಹೇಳಿದ್ದಾರೆ. ಆದರೆ ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್ ಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ? ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಶಾಖೆಗೆ ಬಂದು ಸಂಘದ ಶಿಕ್ಷಣ ಪಡೆಯಿರಿ, ನಿಮಗೂ ಒಳ್ಳೆಯದು – ಹೆಚ್‍ಡಿಕೆಗೆ ಕಟೀಲ್ ಸಲಹೆ
Advertisement
ಶ್ರೀ @hd_kumaraswamy ಅವರು ನೀಡಿದ ಹೇಳಿಕೆಯಿಂದ ನೀವೆಲ್ಲರೂ ಮೈಪರಚಿಕೊಳ್ಳುತ್ತಿರುವುದು ನೋಡಿದರೆ ಸತ್ಯ ಎಷ್ಟು ಕಹಿಯಾಗಿರುತ್ತದೆ ಎಂಬುದು ಅರ್ಥವಾಗುತ್ತದೆ
ಟೀಕೆ ಮಾಡುವ ಭರದಲ್ಲಿ @nalinkateel ಅವರು ʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಹೇಳಿದ್ದಾರೆ. ಆದರೇ, ನಿಮ್ಮ ಪಕ್ಷದ ಫ್ಯಾಮಿಲಿ ಬಿಸಿನೆಸ್ʼಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ?
— HK Kumaraswamy (@HK_Kumaraswamy) October 7, 2021
Advertisement
ಆಪರೇಷನ್ ಕಮಲದ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಸಿಎಂ ಹುದ್ದೆಯನ್ನು ಕಣ್ಣೀರಿಡುತ್ತಲೇ ಕಳೆದುಕೊಂಡರು! ಏಕೆ? ಅದು ಫ್ಯಾಮಿಲಿ ಬ್ಯುಸಿನೆಸ್ ನಿಂದ ಅಲ್ಲವೇ? ನಿಮ್ಮ ಪಕ್ಷದ ಶಾಸಕರೇ ಹಾದಿಬೀದಿಯಲ್ಲಿ ನಿಂತು ನಿಮ್ಮ ಮುಖ್ಯಮಂತ್ರಿಯ ‘ಫ್ಯಾಮಿಲಿ ಬ್ಯುಸಿನೆಸ್’ ಬಗ್ಗೆ ಟೀಕೆ ಮಾಡಿದ್ದನ್ನು ಮರೆತುಬಿಟ್ಟಿರಾ ಕಟೀಲ್ ಅವರೇ? ಅನುಗ್ರಹದ ಹಿತ್ತಲಿನಲ್ಲಿ ನಡೆದ ವ್ಯವಹಾರಗಳ ಬಗ್ಗೆ ಹೇಳಲಿಲ್ಲವೇ? ಎಂದು ವ್ಯಂಗ್ಯ ಮಾಡಿದ್ದಾರೆ.
Advertisement
ಐಎಎಸ್, ಐಪಿಎಸ್ ಅಭ್ಯರ್ಥಿಗಳಿಗೆ ತರಬೇತಿ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದೀರಿ, ಸರಿ. ಸಂಘದ ಸ್ವಯಂಸೇವಕರು ದೇಶ ಸೇವೆ ಮಾಡುತ್ತಿದ್ದಾರೆ ಎನ್ನುತ್ತೀರಿ. ಹಾಗಾದರೆ ಎಲ್ಲರನ್ನೂ ಗಡಿಗೆ ಕಳಿಸಿ. ಗಡಿಯಲ್ಲಿ ಈಗ ಉದ್ವಿಗ್ನ ಪರಿಸ್ಥಿತಿ ಇದೆ. ಕಟೀಲ್ ಅವರೇ ಸುಖಾಸುಮ್ಮನೆ ಮಾತನಾಡುವುದಲ್ಲ, ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡ್ತಾರೆ?- ಸಿದ್ದುಗೆ ಕಾರಜೋಳ ತಿರುಗೇಟು
ಕಳೆದ ಎರಡು ದಿನಗಳ ಹಿಂದೆ ಆರ್‌ಎಸ್‌ಎಸ್ ವಿರುದ್ಧ ಹೆಚ್‍ಡಿಕೆ ಹೇಳಿಕೆ ನೀಡಿದ್ದು, ಆ ಬಳಿಕದಿಂದ ರಾಜ್ಯದಲ್ಲಿ ಆರ್‌ಎಸ್‌ಎಸ್ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ರಾಜಕೀಯ ನಾಯಕರು ತಮಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಆರ್‌ಎಸ್‌ಎಸ್ ಪರ, ವಿರುದ್ಧ ರಾಜಕೀಯ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ