ಹಾಸನ: ಅಂಬೇಡ್ಕರ್ ಪರಿನಿರ್ವಾಣ ದಿನದ (Ambedkar Parinirvana Day) ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಕೆ ಕುಮಾರಸ್ವಾಮಿ (HK Kumaraswamy) ಅವರು ಗದ್ಗದಿತರಾಗಿದ್ದಾರೆ.
ಹಾಸನ (Hassan) ನಗರದ, ಜಿಲ್ಲಾಧಿಕಾರಿ ಕಚೇರಿ ಆವಣರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ ಕುಮಾರಸ್ವಾಮಿ ಭಾಷಣ ಮಾಡುವ ವೇಳೆ ದುಃಖಿತರಾದರು. ಅಂಬೇಡ್ಕರ್ ಅವರು ಪುನಃ ಪುನಃ ನೆನಪಿಗೆ ಬರ್ತಾರೆ. ಅಂಬೇಡ್ಕರ್ ಅವರ ಆಶಯಗಳು ಇನ್ನೂ ಈಡೇರಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಎಲ್ಲವನ್ನೂ ನೋಡ್ತಾ ಇದ್ದೇವೆ. ಎಲ್ಲೋ ಒಂದು ಕಡೆ ಅವರ ಆಶಯಗಳಿಗೆ ಅಣಕ ಮಾಡುವಂತಹ ಘಟನೆಗಳು ಇನ್ನೂ ಕೂಡಾ ಜರುಗುತ್ತಿವೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ
Advertisement
Advertisement
ಅಂಬೇಡ್ಕರ್ ಅವರು ಸಮಾಜವಾದಿ, ಜಾತ್ಯಾತೀತತೆ, ಪ್ರಜಾಪ್ರಭುತ್ವದ ಸಂವಿಧಾನ ಕೊಟ್ಟಿದ್ದಾರೆ. ಸಹೋದರತ್ವವನ್ನು ಸಮಾನತೆಯನ್ನು ಹೇಳುವಂತಹ ಸಂವಿಧಾನ ಇನ್ನೂ ಕೂಡಾ ಪೂರ್ಣ ಜಾರಿ ಮಾಡಿಲ್ಲ ಎಂಬುದನ್ನು ನಾವೆಲ್ಲರೂ ಕೂಡ ಒಪ್ಪಲೇಬೇಕು ಎಂದರು. ಇದನ್ನೂ ಓದಿ: ಮರ್ಯಾದೆ ಉಳಿಸಿಕೊಳ್ಳೋಕೆ ಸಿದ್ದರಾಮಯ್ಯ ಯಾವ ಕ್ಷೇತ್ರ ಕೊಟ್ರೂ ಓಕೆ ಅಂತಾರೆ – ಈಶ್ವರಪ್ಪ
Advertisement
ಅಂಬೇಡ್ಕರ್ ಅವರು ಹಾಕಿಕೊಟ್ಟಂತಹ ಹೋರಾಟದ ಮಾರ್ಗ ಇನ್ನೂ ಕೂಡಾ ಪ್ರಾರಂಭಿಕ ಹಂತದಲ್ಲಿಯೇ ಇದೆ ಎಂಬ ಭಾವನೆ ಮೂಡುತ್ತಿದೆ. ಅಧಿಕಾರ ಒಂದು ಕಡೆ, ಹೋರಾಟ ಒಂದು ಕಡೆ, ಅಧಿಕಾರದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಹೋರಾಟದಿಂದ ಮಾತ್ರ ಸಾಧ್ಯ ಎಂಬುದನ್ನು ಅವರು ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಕಣ್ಣೀರಿಟ್ಟರು.