ಮೊಹಾಲಿ: ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದ ನಾಯಕ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ ಜೊತೆಗೆ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 153 ಎಸೆತದಲ್ಲಿ 13 ಬೌಂಡರಿ, 12 ಸಿಕ್ಸರ್ ಗಳ ನೆರವಿನಿಂದ ರೋಹಿತ್ ದ್ವಿಶತಕ ಸಿಡಿಸಿದ್ದರು. ಈ ಮೂಲಕ ವರ್ಷವೊಂದರಲ್ಲಿ 20 ಇನ್ನಿಂಗ್ಸ್ ಮೂಲಕ ಬರೋಬ್ಬರಿ 45 ಸಿಕ್ಸರ್ ಸಿಡಿಸುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದು, ವರ್ಷವೊಂದರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
Advertisement
ಈ ಹಿಂದೆ ಭಾರತದ ಪರ ವರ್ಷವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿತ್ತು. 1998ರಲ್ಲಿ 33 ಇನ್ನಿಂಗ್ಸ್ ಗಳಲ್ಲಿ ಸಚಿನ್ 40 ಸಿಕ್ಸರ್ ಸಿಡಿಸಿದ್ದರು.
Advertisement
Advertisement
ಇನ್ನು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿ ವಿಲಿಯರ್ಸ್ 2015 ರಲ್ಲಿ 58 ಸಿಕ್ಸ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, 2002ರಲ್ಲಿ 48 ಸಿಕ್ಸ್ ಸಿಡಿಸುವ ಮೂಲಕ ನಂತರ ಸ್ಥಾನವನ್ನು ಪಾಕ್ ಆಟಗಾರ ಶಾಹಿದ್ ಅಫ್ರಿದಿ ಪಡೆದುಕೊಂಡಿದ್ದಾರೆ.
Advertisement
ಪ್ರಸ್ತುತ ವರ್ಷದ ಅವಧಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಶ್ರೀಲಂಕಾ ವಿರುದ್ಧ ಇನ್ನು ಒಂದು ಪಂದ್ಯ ಬಾಕಿ ಉಳಿದಿದ್ದು, ಆಫ್ರಿದಿ ದಾಖಲೆಯನ್ನು ಮುರಿಯುವ ಅವಕಾಶವಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯವು ಡಿಸೆಂಬರ್ 17 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ವೈ.ಎಸ್.ರಾಜಶೇಖರ ರೆಡ್ಡಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ರೋಹಿತ್ ರನ್ ಏರಿದ್ದು ಹೀಗೆ:
50 ರನ್ – 65 ಎಸೆತ, 5 ಬೌಂಡರಿ
100 ರನ್ – 115 ಎಸೆತ, 115 ಎಸೆತ, 9 ಬೌಂಡರಿ, 1 ಸಿಕ್ಸರ್
150 ರನ್ – 133 ಎಸೆತ, 10 ಬೌಂಡರಿ, 7 ಸಿಕ್ಸರ್
200 ರನ್ – 151 ಎಸೆತ, 13 ಬೌಂಡರಿ, 11 ಸಿಕ್ಸರ್
208 ರನ್ – 153 ಎಸೆತ, 13 ಬೌಂಡರಿ, 12 ಸಿಕ್ಸರ್