ಬೈಕ್ ಸವಾರನ ಸ್ಥಿತಿ ಗಂಭೀರ – ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಚಿಕ್ಕಮಗಳೂರು: ಬಾಳೆಹೊನ್ನೂರು – ಚಿಕ್ಕಮಗಳೂರು (Chikkamagaluru) ಮಾರ್ಗದ ಜೇನುಬೈಲು ಬಳಿ ಹಿಟ್ & ರನ್ (Hit And Run) ಪ್ರಕರಣ ನಡೆದಿದೆ.
ಲೈನ್‍ಮೆನ್ ಬೈಕಿಗೆ ಕಾರು ಚಾಲಕನೊಬ್ಬ ಡಿಕ್ಕಿ ಹೊಡೆಸಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ರಸ್ತೆ ತಿರುವಿನಲ್ಲಿ ಬೈಕಿಗೆ ಕಾರು (Accident) ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಲೈನ್‍ಮೆನ್ ಅವಿನಾಶ್ ಬೈಕಿನಿಂದ ಹಾರಿ ಬಿದ್ದಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನೈಟ್‌ಕ್ಲಬ್‌ನ ಛಾವಣಿ ಕುಸಿದು 79 ಮಂದಿ ದುರ್ಮರಣ
ವಿದ್ಯುತ್ ಲೈನ್ ದುರಸ್ಥಿಗೆಂದು ಅವಿನಾಶ್ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯವನ್ನು ಹಿಂದಿನ ಬೈಕ್ ಸವಾರ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ.
ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Gadag | ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಆರೋಪ