‘ಕೆಜಿಎಫ್ 2′ (KGF 2) ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ನ್ಯಾಚುರಲ್ ಸ್ಟಾರ್ ನಾನಿಗೆ (Nani) ಜೊತೆಯಾಗಿದ್ದಾರೆ. ‘ಹಿಟ್ 3’ ಸಿನಿಮಾದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. ಸದ್ಯ ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಆಗಿದೆ. ಸಾಂಗ್ ಯೂಟ್ಯೂಬ್‌ನಲ್ಲಿ ಭರ್ಜರಿ ವಿವ್ಸ್ ಪಡೆದುಕೊಳ್ಳುತ್ತಿದೆ.
ಮೊದಲ ಬಾರಿಗೆ ಹಿಟ್ 3 ಮೂಲಕ ನಾನಿಗೆ ಶ್ರೀನಿಧಿ ಜೋಡಿಯಾಗಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ‘ಪ್ರೇಮ ವೆಲ್ಲುವ’ ಸಾಂಗ್ ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ನಾನಿ ಮತ್ತು ಶ್ರೀನಿಧಿ ಕೆಮಿಸ್ಟ್ರಿ ಮುದ್ದಾಗಿದೆ. ಇಬ್ಬರ ಲವ್ ರೊಮ್ಯಾನ್ಸ್ ಚೆನ್ನಾಗಿ ಮೂಡಿ ಬಂದಿದೆ. ಇದನ್ನೂ ಓದಿ:ನೇಹಾ ಗೌಡ ಮಗಳ ಅದ್ಧೂರಿ ನಾಮಕರಣ- ಪುತ್ರಿಗೆ ಮುದ್ದಾದ ಹೆಸರಿಟ್ಟ ನಟಿ
View this post on Instagram
ಇನ್ನೂ ನಾನಿ ನಟನೆಯ ‘ಹಿಟ್ 3’ (HIT 3) ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಹಿಂದಿನ 2 ಪಾರ್ಟ್‌ಗಳಲ್ಲಿ ಮೂಡಿ ಬಂದ ಹಿಟ್ ಸಿನಿಮಾ ಸಕ್ಸಸ್ ಕಂಡಿತ್ತು. ಹಾಗಾಗಿ ಸಹಜವಾಗಿ ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಕುತೂಹಲವಿದೆ. ನಾನಿ ಅವತಾರ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಈ ವರ್ಷ ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ.
ಇನ್ನೂ ‘ಕೆಜಿಎಫ್ 2’ರ ಸಕ್ಸಸ್ ಬಳಿಕ ಶ್ರೀನಿಧಿ ಶೆಟ್ಟಿ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯುಸಿಯಾಗಿದ್ದಾರೆ. ಕಥೆ ಮತ್ತು ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ಹಾಗಾಗಿ ನಾನಿ ಜೊತೆ ಹಿಟ್ ಕೊಡಲು ಅವರು ರೆಡಿಯಾಗಿದ್ದಾರೆ. ಈ ಸಿನಿಮಾದ ಮೂಲಕ ಮತ್ತೆ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.