ಬೆಂಗಳೂರು: ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಹೋಗಿ ರೌಡಿ ಶೀಟರ್ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ರಾಮನಗರದ ಬಸವನಪುರ ಗ್ರಾಮದ ಬಳಿ ನಡೆದಿದೆ.
Advertisement
ಮಾದನಾಯಕನಹಳ್ಳಿಯ ದಿಲೀಪ್ ಸಾವನ್ನಪ್ಪಿದ ರೌಡಿಶೀಟರ್. ಬಸವನಪುರ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತಾಪಸಣೆ ವೇಳೆ ಕಾರಿನಲ್ಲಿದ್ದ 4 ಜನರು ಓಡಿ ಹೋಗಲು ಯತ್ನಿಸಿದ್ದಾರೆ. ಈ ಪೈಕಿ ಮೂರು ಜನ ಲಾಕ್ ಆದ್ರೆ ದಿಲೀಪ್ ಮಾತ್ರ ಪೊಲೀಸರ ಮೇಲಿನ ಭಯದಿಂದ ಕಾರಿನಿಂದ ಇಳಿದು ಕಾಲ್ಕಿತ್ತಿದ್ದ ಪೊಲೀಸರು ಬೆನ್ನತ್ತಿದಾಗ ರೈಲ್ವೇ ಹಳಿ ಕ್ರಾಸ್ ಮಾಡುವ ಬರದಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಕೆಟಿಎಂ ಭರತ, ರವಿ ಸೇರಿದಂತೆ ಇತರರು ಪ್ರಕರಣದ ಹಿನ್ನೆಲೆ ರಾಮನಗರ ಜೈಲಿಗೆ ತೆರಳಿ ಸೈನ್ ಮಾಡಿ ಬಳಿಕ ಎಣ್ಣೆ ಪಾರ್ಟಿ ನಡೆಸಿ ಮೈಸೂರು ಕಡೆ ಹೋಗುತ್ತಿದ್ದೆವು ಎಂದು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: 2 ಕೋಟಿ ದರೋಡೆ ಕೇಸ್ – ಪತ್ನಿ ಸಾಲ ತೀರಿಸಲು ಕನ್ನ ಹಾಕಿದ ಇಬ್ಬರು ಪತ್ನಿಯರ ಮುದ್ದಿನ ಗಂಡ
Advertisement
Advertisement
ದಿಲೀಪ್ ಪೊಲೀಸರನ್ನು ಕಂಡು ಓಡಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ರಾಮನಗರ ಗ್ರಾಮಾಂತರ ಪೊಲೀಸರು ತನಿಖೆ ನಡೆಸ್ತಿದ್ದು, ಘಟನಾ ಸ್ಥಳಕ್ಕೆ ಖುದ್ದು ರಾಮನಗರ ಎಸ್‍ಪಿ ಸಂತೋಷ್ ಬಾಬು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು
Advertisement