ಹಾಸನ: ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಗುರುವಾರದಿಂದ ಚಾಲನೆ ದೊರೆಯಲಿದೆ.
ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ರ ನಂತರ ಗೊನೆಯುಳ್ಳ ಬಾಳೆಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ನವೆಂಬರ್ 1 ರಿಂದ 9ರ ವರೆಗೆ ಈ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದ್ದು, ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಇದರಿಂದಾಗಿ ಕೇವಲ 7 ದಿನ ಮಾತ್ರ ದೇವಿಯ ದರ್ಶನ ಸಿಗಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಲ್. ನಾಗರಾಜ್ ಹೇಳಿದ್ದಾರೆ.
Advertisement
Advertisement
ಆಮೆಗತಿಯಲ್ಲಾದರೂ ಜಿಲ್ಲಾಡಳಿತ ಭಕ್ತರಿಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದರೆ, ಇದೇ ಮೊದಲ ಬಾರಿಗೆ ಕೇಳಿ ಬಂದ ಪವಾಡ ಬಯಲು ಕೂಗು ಸೇರಿದಂತೆ ಅನೇಕ ವಿರೋಧಾಭಾಸಗಳ ನಡುವೆ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.
Advertisement
ಈ ಬಾರಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ದರ್ಶನ ಆರಂಭ ಒಂದು ವಿಶೇಷವಾಗಿದ್ದು, ಆಶ್ವೀಜ ಮಾಸದ ಮೊದಲ ಗುರುವಾರ ಅಂದರೆ ನಾಳೆ ದೇವಾಲಯದ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ಮೈಸೂರು ಅರಸು ವಂಶಸ್ಥರು ಬಾಳೆಕಂಬ ಕಡಿದ ಕೂಡಲೇ ವರ್ಷದಿಂದ ಮುಚ್ಚಿದ್ದ ದೇವಿಯ ಗರ್ಭಗುಡಿಯ ಬಾಗಿಲು ಸಚಿವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ತೆರೆಯಲಿದೆ.
Advertisement
ಬೇರೆ ಬೇರೆ ನಗರದಿಂದ ಭಕ್ತಾಧಿಕಗಳು ಆಗಮಿಸುವ ಕಾರಣ ಪೊಲೀಸ್ ಇಲಾಖೆಯಿಂದಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಪ್ರತಿದಿನ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸರಗಳ್ಳತನವನ್ನು ತಡೆಯುವ ದೃಷ್ಟಿಯಿಂದ ದೇವಾಸ್ಥಾನದಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಆದರೂ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಭಕ್ತಾಧಿಗಳು ಸಾಧ್ಯವಾದಷ್ಟು ಕಡಿಮೆ ಒಡವೆಯನ್ನು ಹಾಕಿಕೊಂಡು ಬರಬೇಕು ಎಂದು ಜಿಲ್ಲಾ ಪೊಲೀಸ್ ವರಷ್ಟಾಧಿಕಾರಿ ಡಾ. ಪ್ರಕಾಶ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv