ಐಟಿ ಕಂಪನಿಗಳಿಗೆ ಟೆಕ್ಕಿಗಳಿಂದಲೇ ವಂಚನೆ!

Public TV
1 Min Read
Interview 1

ಬೆಂಗಳೂರು: ಇತ್ತೀಚಿನ ಸಂದರ್ಭದಲ್ಲಿ ಐಟಿ ಕಂಪನಿಗಳಲ್ಲಿ ಟೆಕ್ಕಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ. ಆದರೆ ಈ ಅವಕಾಶವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಖತರ್ನಾಕ್‌ ಟೆಕ್ಕಿಗಳು ಐಟಿ ಕಂಪನಿಗಳನ್ನೇ ಯಾಮಾರಿಸುತ್ತಿದ್ದಾರೆ. ಅಂತಹ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಬೆಂಗಳೂರಿನ ಕಂಪನಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಉದ್ಯೋಗಾಕಾಂಕ್ಷಿಯೇ ಬೇರೆ, ನೇಮಕಾತಿಗೆ ಬಂದಿದ್ದ ವ್ಯಕ್ತಿಯೇ ಬೇರೆಯಾಗಿದ್ದರು. ಈ ವಂಚನೆಯನ್ನು ಗಮನಿಸಿದ ಕಂಪೆನಿ ಮ್ಯಾನೇಜರ್‌ ಅಚ್ಚರಿಗೊಂಡಿದ್ದಾರೆ. ಇದನ್ನೂ ಓದಿ: ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಕೇಳಬಹುದು

it company

ಕಂಪನಿ ನಡೆಸಿದ ಸಂದರ್ಭದಲ್ಲಿ ಆಯ್ಕೆಯಾಗಿ ಕೆಲಸಕ್ಕೆ ನೇಮಕಗೊಂಡವರಿಗೆ ವೀಡಿಯೋ ಕಾನ್ಫರೆನ್ಸ್‌ ಆಯೋಜಿಸಲಾಗಿತ್ತು. ಆದರೆ ಒಬ್ಬರು ಮಾತ್ರ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಇದರಿಂದ ಅನುಮಾನಗೊಂಡ ಕಂಪೆನಿಯವರು ಮತ್ತೆ ಅಭ್ಯರ್ಥಿಗಳನ್ನು ಕಚೇರಿಗೆ ಕರೆಸಿ ಸಂದರ್ಶನ ನಡೆಸಿದರು. ಈ ಹಿಂದೆ ನಡೆದಿದ್ದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗೆ ಬದಲಾಗಿ ಮತ್ತೊಬ್ಬ ಬಂದಿದ್ದ. ಈತ ನೇಮಕಾತಿ ವೇಳೆ ವಂಚನೆ ಮಾಡಿದ್ದಾನೆ ಎಂಬುದು ಕಂಪನಿಯವರಿಗೆ ನಂತರ ಸ್ಪಷ್ಟವಾಗಿದೆ.

ಹೆಚ್ಚೆಚ್ಚು ನೇಮಕಾತಿಗಳನ್ನು ಮಾಡಿಕೊಳ್ಳುತ್ತಿರುವ ಐಟಿ ಕಂಪನಿಗಳಿಗೆ ಟೆಕ್ಕಿಗಳು ವಂಚಿಸುತ್ತಿರುವ ಸಾಕಷ್ಟು ಪ್ರಕರಣಗಳು ವರದಿಯಾಗಿದೆ. ಇದನ್ನು ಅರಿತ ಕಂಪನಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತಂದಿವೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಶೀಘ್ರವೇ 1 ನಿಮಿಷದ ಸ್ಟೋರಿ ಹಾಕಬಹುದು!

Crome Fraud

ನೇಮಕಾತಿಯ ಸಂದರ್ಶನದ ವೇಳೆ ಉದ್ಯೋಗಾಕಾಂಕ್ಷಿಯ ಫೋಟೋ ತೆಗೆದುಕೊಳ್ಳುತ್ತಿದ್ದೇವೆ. ಜೊತೆಗೆ ಸಂದರ್ಶನದ ಸಂಭಾಷಣೆಯನ್ನು ರೆಕಾರ್ಡ್‌ ಮಾಡುತ್ತಿದ್ದೇವೆ ಎಂದು ಐಟಿ ಕಂಪನಿಯ ಹಿರಿಯ ವ್ಯವಸ್ಥಾಪಕರೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *