ಮಂಡ್ಯ: ಶ್ರೀರಂಗಪಟ್ಟಣ ದಸರಾ (Shrirangapattana Dasara) ಮಹೋತ್ಸವಕ್ಕೆ ಆಗಮಿಸಿದ ಹಿರಣ್ಯ ಎಂಬ ಆನೆ ಚಿತ್ರಾಲಂಕಾರದ ಬಳಿಕ ಬೆದರಿ ಅಡ್ಡಾದಿಡ್ಡಿ ಓಡಾಡಿದೆ. ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿ ಜನರು ಓಡಿದ್ದಾರೆ. ಕೂಡಲೇ ಎಚ್ಚೆತ್ತ ಮಾವುತರು ಹಾಗೂ ಕಾವಾಡಿಗರು ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ. ಈ ಘಟನೆ ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಬಳಿ ನಡೆದಿದೆ.
ನಿನ್ನೆಯಷ್ಟೇ ಶ್ರೀರಂಗಪಟ್ಟಣಕ್ಕೆ ಮಹೇಂದ್ರ, ಲಕ್ಷ್ಮೀ, ಹಿರಣ್ಯ ಎಂಬ 3 ಆನೆಗಳು ಆಗಮಿಸಿವೆ. ಬನ್ನಿಮಂಟಪದಿಂದ ರಂಗನಾಥ ಮೈದಾನದವರೆಗೆ ಅಂಬಾರಿ ಜೊತೆ ಹಿರಣ್ಯ ಆನೆ ಹೆಜ್ಜೆ ಹಾಕಲಿದೆ. ಮಹೇಂದ್ರ ಆನೆ ಮರದ ಅಂಬಾರಿ ಹೊರಲಿದೆ. ಈ ಆನೆಗೆ ಕುಮ್ಕಿ ಆನೆಯಾಗಿ ಲಕ್ಷ್ಮೀ ಹಾಗೂ ಹಿರಣ್ಯ ಆನೆಗಳು ಹೆಜ್ಜೆ ಹಾಕಲಿದೆ. ಆನೆಗಳಿಗೆ ಚಿತ್ರಾಲಂಕಾರದ ಮಾಡಿದ ಬಳಿಕ ಹಿರಣ್ಯ ಎಂಬ ಆನೆ ಬೆದರಿ ಅಡ್ಡಾದಿಡ್ಡಿ ಓಡಾಡಿದೆ. ಜನರು ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿದ್ದಾರೆ. ಈ ವೇಳೆ ಎಚ್ಚೆತ್ತ ಮಾವುತರು, ಕಾವಾಡಿಗರು ಭಾರೀ ಅನಾಹುತ ತಪ್ಪಿಸಿದ್ದಾರೆ. ಇದನ್ನೂ ಓದಿ: ಮಗಳ ಸೆಕ್ಸ್ ವೀಡಿಯೋ ವೈರಲ್ ಮಾಡೋದಾಗಿ ಪಾಕ್ ವಂಚಕರ ಕರೆ – ಹೃದಯಾಘಾತದಿಂದ ಶಿಕ್ಷಕಿ ಸಾವು
Advertisement
Advertisement
ಈ ಹಿಂದೆಯೂ ಇದೇ ರೀತಿ ಅವಾಂತರ ಸಂಭವಿಸಿತ್ತು. ಶ್ರೀರಂಗಪಟ್ಟಣ ದಸರಾದಲ್ಲಿ ಚಾಮುಂಡೇಶ್ವರಿ ಹೋತ್ತು ಸಾಗುತ್ತಿದ್ದ ಗೋಪಾಲಸ್ವಾಮಿ ಹೆಸರಿನ ಆನೆ ಪಟಾಕಿ, ವಾದ್ಯದ ಸದ್ದಿಗೆ ಬೆದರಿ ದಿಕ್ಕಾಪಾಲಾಗಿ ಜನರತ್ತ ನುಗ್ಗಿತ್ತು. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿತ್ತು. ಆನೆ ಗಾಬರಿಗೊಂಡು ಒಂದು ಸುತ್ತು ತಿರುಗುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ನಂತರ ವಾದ್ಯ, ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ: ಮಹಾರಾಷ್ಟ್ರ ಸಚಿವಾಲಯದ 3ನೇ ಮಹಡಿಯಿಂದ ಜಿಗಿದ ಡೆಪ್ಯೂಟಿ ಸ್ಪೀಕರ್!