ಹಿಂದೂ ಮುಖಂಡ ಸತೀಶ್ ಪೂಜಾರಿ ಬಂಧನ, ಬಿಡುಗಡೆ

Public TV
1 Min Read
davanagere protest

ದಾವಣಗೆರೆ: ವಿವಾದಿತ ಫ್ಲೆಕ್ಸ್ ತೆರವು ಮಾಡಿದ್ದನ್ನು ಪ್ರಶ್ನಿಸಿ ಪ್ರತಿಭಟಿಸಿದ್ದ ಹಿಂದೂ ಮುಖಂಡ ಸತೀಶ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಟ್ಟಿಕಲ್‌ನಲ್ಲಿ ಅಫ್ಜಲ್ ಖಾನ್‌ನನ್ನು ಛತ್ರಪತಿ ಶಿವಾಜಿ ಕೊಂದ ಫ್ಲೆಕ್ಸ್ ಹಾಕಲಾಗಿತ್ತು. ಎಚ್ಚೆತ್ತ ಪೊಲೀಸರು ತಕ್ಷಣ ಫ್ಲೆಕ್ಸ್ ತೆರವುಗೊಳಿಸಿದ್ದಾರೆ. ತೆರವು ಮಾಡಿದ್ದನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅದರಲ್ಲಿ ಹಿಂದೂ ಜಾಗರಣ ವೇದಿಕೆ ರಾಜ್ಯ ದಕ್ಷಿಣ ವಿಭಾಗೀಯ ಸಹ ಸಂಚಾಲಕ ಸತೀಶ್ ಪೂಜಾರಿ ಮುಂಚೂಣಿಯಲ್ಲಿದ್ದ.

ಪ್ರಚೋದನೆ ಮಾಡಿದ್ದಾರೆ ಎಂದು ಅರೋಪ ಹಿನ್ನೆಲೆ ಸತೀಶ್ ಪೂಜಾರಿಯನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧನ ಬೆನ್ನಲ್ಲೇ ಠಾಣೆ ಮುಂದೆ ಹಲವಾರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು.

ಸತೀಶ್ ಪೂಜಾರಿಯನ್ನು ಬಿಡುಗಡೆ ಮಾಡುವವರೆಗೂ ಸ್ಥಳದಿಂದ ಹೋಗೋದಿಲ್ಲ ಎಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಎಎಸ್ಪಿ ಪರಮೇಶ್ವರಪ್ಪ, ಡಿವೈಎಸ್‌ಪಿ ಬಸವರಾಜ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು. ಕೊನೆಗೆ ಸ್ಟೇಷನ್ ಬೇಲ್ ಮೇಲೆ ಸತೀಶ್ ಪೂಜಾರಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

Share This Article