ರಾಮಮಂದಿರ ನಿರ್ಮಾಣಕ್ಕೆ ಯತ್ನ – ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ವಿರೋಧ

Public TV
1 Min Read
ram temple ckb

ಚಿಕ್ಕಬಳ್ಳಾಪುರ: ಹಿಂದೂಪರ ಸಂಘಟನೆಗಳು ಪುರಸಭೆಗೆ ಸೇರಿದ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಯತ್ನಿಸಿದ್ದು, ಗೌರಿಬಿದನೂರು ನಗರದಲ್ಲಿ ಈ ವಿಚಾರವಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ckb ram mandir

ಗೌರಿಬಿದನೂರು ನಗರದ ಬೆಂಗಳೂರು ವೃತ್ತದ ರಸ್ತೆ ಬದಿಯ ಜಾಗ ಇದಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಹಿಂದೂಪರ ಸಂಘಟನೆಗಳು ಪ್ರಯತ್ನಿಸುತ್ತಿವೆ. ಸಂಘಟನೆಗಳು ಈಗಾಗಲೇ ಆ ಜಾಗದಲ್ಲಿ ರಾಮನ ವಿಗ್ರಹವನ್ನು ಕೂಡಾ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿಸುತ್ತಿದ್ದು, ಈ ವೇಳೆ ಮಂದಿರ ನಿರ್ಮಾಣ ಕಾರ್ಯಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಬೆಂಗಳೂರು ವೃತ್ತದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದು, ವಾಹನಗಳನ್ನು ತಡೆದು ಬೆಂಗಳೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ. ಇದನ್ನೂ ಓದಿ: ರಾಜ್ಯಗಳಲ್ಲಿ ಹಿಜಬ್‌ ವಿವಾದ – ಹೈಕೋರ್ಟ್‌ಗಳ ತೀರ್ಪುಗಳೇನು? ಇಲ್ಲಿದೆ ಮಾಹಿತಿ

ckb ram amndir

ಪ್ರತಿಭಟನೆ ಕುರಿತು ಪೊಲೀಸರು ದಲಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರನ್ನು ಸಮಾಧಾನ ಪಡಿಸುತ್ತಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಜೊತೆ ತಹಶೀಲ್ದಾರ್ ಶಾಂತಿ ಸಭೆ ನಡೆಸಿದ್ದಾರೆ. ಈ ಜಾಗದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟವು ಬಸವ, ಬುದ್ಧ, ಅಂಬೇಡ್ಕರ್‌ರ ಸಮಾನತೆ ಸ್ಥೂಪ ಸ್ಥಾಪಿಸಲು ಉದ್ದೇಶಿಸಿದ್ದು, ಜಾಗ ಮಂಜೂರಿಗಾಗಿ ಪುರಸಭೆಗೆ ಮನವಿ ಮಾಡಿಕೊಂಡಿದ್ದರು. ಆದರೆ ಈಗ ಏಕಾಏಕಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದರಿಂದ ವಿರೋಧ ವ್ಯಕ್ತಪಡಿಸಿದೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

Share This Article
Leave a Comment

Leave a Reply

Your email address will not be published. Required fields are marked *