ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ತಣ್ಣಗಾಗಿದ್ದ ಧರ್ಮದಂಗಲ್ ಮತ್ತೆ ಸದ್ದು ಮಾಡುವ ಸಾಧ್ಯತೆ ಹೆಚ್ಚಾಗ್ತಿದೆ. ಪಶು ಸಂಗೋಪನಾ ಸಚಿವರ ಹೇಳಿಕೆಯೊಂದು ಸದ್ಯ ಇಡೀ ಹಿಂದೂ ಸಂಘಟಕರು ಕೆರಳುವಂತೆ ಮಾಡಿದೆ. ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ (Congress Manifesto) ಬಿಡುಗಡೆಯಾದಗಿನಿಂದಲೂ ಕಾಂಗ್ರೆಸ್ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರುತ್ತಿದ್ದವು. ಇದರ ಬೆನ್ನಲ್ಲೆ ಪ್ರಣಾಳಿಕೆ ಕೆಲ ಅಂಶಗಳನ್ನ ಜಾರಿಗೆ ತರುವ ನಿಟ್ಟಿನಲ್ಲಿ ಕೆಲ ಸಚಿವರು, ಕಾಂಗ್ರೆಸ್ ಮುಖಂಡರ ಹೇಳಿಕೆ ಹಿಂದೂ ಪರರನ್ನ ಆಕ್ರೋಶಗೊಳ್ಳುವಂತೆ ಮಾಡಿದೆ. ಕಾಂಗ್ರೆಸ್ ಸರ್ಕಾರ (Congress Government) ಯಾರನ್ನೋ ಮೆಚ್ಚಿಸೋಕೆ ಈ ರೀತಿಯ ನಿರ್ಧಾರಗಳಿಗೆ ಮುಂದಾಗುತ್ತಿದೆ ಎಂಬ ಆರೋಪದ ಜೊತೆಗೆ ಇದರ ವಿರುದ್ಧ ಅದೆಂತಹದ್ದೆ ಪರಿಸ್ಥಿತಿ ಬಂದರೂ ನಾವು ಹೋರಾಟಕ್ಕೆ ಸಿದ್ಧವಾಗೋಣ. ಸರ್ಕಾರ ವಿರುದ್ಧ ಹೋರಾಡೋಣ ಎಂಬ ಬಹಿರಂಗ ಕರೆ ನೀಡುವ ಮೂಲಕ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತಾಡ್ತಾರೆ ಅಷ್ಟೇ: ವಿನಯ್ ಕುಲಕರ್ಣಿ
ಇದರ ಮಧ್ಯೆ ಪಶು ಸಂಗೋಪನಾ ಸಚಿವ ವೆಂಕಟೇಶ್ (Minister Venkatesh) ಕೂಡ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿರುವ ಹಿಂದೂ ಸಂಘಟನೆಗಳು, ಒಂದೊಮ್ಮೆ ಕೂಡಲೇ ಕ್ಷಮೆ ಕೇಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ. ಗಲ್ಲಿಗೇರಿಸಿದ್ರೂ ನಾವು ಮಾತ್ರ ಹೋರಾಟ ನಿಲ್ಲಿಸಲ್ಲ. ಇಡೀ ರಾಜ್ಯವ್ಯಾಪಿ ಹಿಂದೂಗಳು ಮತ್ತು ಸ್ವಾಮೀಜಿಗಳ ಗೋ ರಕ್ಷಣೆಗೆ ಮುಂದಾಗಬೇಕಾಗುತ್ತೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಧರ್ಮಗಳ ನಡುವಿನ ಕಿತ್ತಾಟಕ್ಕೆ ಕಾರವಾಗುವ ಆತಂಕ ಎದುರಾಗಿದೆ. ಸರ್ಕಾರ ಯಾವ ರೀತಿ ಪರಿಸ್ಥಿತಿ ನಿಭಾಯಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಎಮ್ಮೆ ಕಡಿಯೋದಾದ್ರೆ ಹಸು ಏಕೆ ಕಡಿಯಬಾರದು?: ಸಚಿವ ವೆಂಕಟೇಶ್ ವಿವಾದಾತ್ಮಕ ಹೇಳಿಕೆ