ಬೆಂಗಳೂರು: ಹಿಜಬ್, ಹಲಾಲ್ ಕಟ್ ಹಾಗೂ ಜಟ್ಕಾ ಕಟ್, ಮಸೀದಿಗಳಲ್ಲಿ ಸೌಂಡ್ ಬ್ಯಾನ್‍ಗೊಳಿಸುವ ಬಗ್ಗೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ಇದೀಗ ಐತಿಹಾಸಿಕ ಬೆಂಗಳೂರು ಕರಗ ಉತ್ಸವದ ಮೇಲೂ ಕರಿನೆರಳಿನ ಭೀತಿ ಎದುರಾಗಿದೆ. ಕರಗ ಉತ್ಸವದ ವೇಳೆ ಮೂರ್ತಿಯನ್ನು ದರ್ಗಾಕ್ಕೆ ತೆಗೆದುಕೊಂಡು ಹೀಗುವುದಕ್ಕೆ ಹಿಂದೂ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
Advertisement
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕರಗ ಉತ್ಸವ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕಾಲದಿಂದಲೂ ಕರಗ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವಕ್ಕೆ ದೇಶ, ವಿದೇಶಗಳಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದರು. ಇಂದಿಗೂ ಕರಗ ಉತ್ಸವಕ್ಕೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳ 50 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ
Advertisement
Advertisement
ರಾತ್ರಿ ಆರಂಭವಾಗುವ ಕರಗ ಸಾಮಾನ್ಯವಾಗಿ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಅಣ್ಣಮ್ಮ ದೇವಸ್ಥಾನ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಮಾರ್ಗವಾಗಿ ಕರಗ ಸಾಗುತ್ತದೆ. ವಿಶೇಷವೆಂದರೆ ಪ್ರತಿ ವರ್ಷ ಕರಗ ಉತ್ಸವ ಮೂರ್ತಿಯನ್ನು ಮಸ್ತಾನ್ ಸಾಬ್ ದರ್ಗಾದ ಒಳಗೆ ಕೊಂಡ್ಯೊಯಲಾಗುತ್ತದೆ. ಅದರಂತೆ ಈ ಬಾರಿ ಕೂಡ ಸಂಪ್ರದಾಯದಂತೆ ಕರಗ ಉತ್ಸವ ಮೂರ್ತಿಯನ್ನು ದರ್ಗಾಕ್ಕೆ ಬರಲಿ ಎಂದು ಮೌಲ್ವಿಗಳು ಆಹ್ವಾನ ನೀಡಿ ಮನವಿ ಮಾಡಿದ್ದಾರೆ. ಆದರೆ ಕೆಲ ಹಿಂದೂ ಪರ ಸಂಘಟನೆಗಳು ಕರಗ ಉತ್ಸವ ಮೂರ್ತಿಯನ್ನು ದರ್ಗಾಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿವೆ.
Advertisement
ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಮುಸ್ಲಿಂ ಧರ್ಮಗುರುಗಳು ಭೇಟಿ ನೀಡಿ, ಕರಗ ಉತ್ಸವ ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಏನೇ ವಿರೋಧ ಬಂದರೂ ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಉತ್ಸವ ಭೇಟಿ ನೀಡಲಿ. ನೂರಾರು ವರ್ಷಗಳ ಇತಿಹಾಸದಂತೆ ಆಚರಣೆ ನಡೆಯಲಿದೆ ಎಂದು ಸಮಿತಿಯಿಂದ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಲಾಲ್ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕರಗ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಅವರು, ಕರಗ ಉತ್ಸವದ ಸಂದರ್ಭದಲ್ಲಿ ದರ್ಗಾಗೆ ಭೇಟಿ ನೀಡಿ ಮುಂದೆ ಸಾಗುವುದು ಹಿಂದಿನಿಂದ ನಡೆದು ಬಂದ ಪದ್ಧತಿಯಾಗಿದೆ. ಈಗಾಗಲೇ ಕೆ.ಆರ್. ಮಾರುಕಟ್ಟೆ ಸರ್ಕಲ್‍ನಲ್ಲಿರುವ ದರ್ಗಾದಿಂದ ಮುಸ್ಲಿಂ ಮುಖಂಡರು ಕರಗ ಉತ್ಸವ ಸಮಿತಿಯನ್ನು ಭೇಟಿ ಮಾಡಿ, ಎಲ್ಲರೂ ಎಂದಿನಂತೆ ಕೂಡಿ ಕರಗ ಆಚರಣೆ ಮಾಡೋಣ ಎಂದು ಹೇಳಿದ್ದಾರೆ. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಡಲಿರುವ ಕರಗ ದಾರಿಯಲ್ಲಿ ಸಿಗುವ ದರ್ಗಾದ ಒಳಗೆ ಹೋಗಿ ದರ್ಗಾದ ದರ್ಶನ ಮಾಡಿ ಮುಂದೆ ಸಾಗುವ ಇತಿಹಾಸವಿದೆ. ಶತಮಾನಗಳ ಇತಿಹಾಸವಿರುವ ಬೆಂಗಳೂರಿನ ಕರಗ ಎಂದಿನಂತೆ ನಡೆಯಲಿದೆ ಎಂದಿದ್ದಾರೆ.
ಎರಡು ವರ್ಷ ಕೊರೊನಾ ಕರಿನೆರಳು ಕರಗದ ಮೇಲೆ ಬಿದ್ದಿತ್ತು. ಹೀಗಾಗಿ ಈ ಬಾರಿ ವಿಜೃಂಭಣೆಯಿಂದ ಕರಗ ಆಚರಣೆಗೆ ಸಿದ್ಧತೆ ನಡೆದಿದೆ. ಬೆಂಗಳೂರಿನ ಐತಿಹಾಸಿಕ ಕರಗ ಆಚರಣೆಯು ಏಪ್ರಿಲ್ 8 ರಿಂದ ಪ್ರಾರಂಭವಾಗಲಿದೆ. ಏಪ್ರಿಲ್ 16 ರಂದು ನಡೆಯುವ ಕರಗ ಶಕ್ತ್ಯೋತ್ಸವ ನಡೆಯುವ ದಿನವಾಗಿದ್ದು, ಏಪ್ರಿಲ್ 18ರಂದು ಸಂತೋತ್ಸವ ಧ್ವಜಾರೋಹಣದ ಮೂಲಕ ಕರಗ ಉತ್ಸವಕ್ಕೆ ತೆರೆ ಬೀಳಲಿದೆ.