ತುಮಕೂರು: ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಜೊತೆಯಾಗಿ ಆಚರಿಸುವ ಬಾಬಯ್ಯನ ಉತ್ಸವದಲ್ಲಿ ಆಚರಣೆಯೊಂದನ್ನು ತುಮಕೂರಿನ ಹೆಗ್ಗೆರೆಯಲ್ಲಿ ನಡೆಸಿಕೊಂಡು ಬರಲಾಗಿದೆ.
ಬಾಬಯ್ಯನ ಉತ್ಸವ ಸಾಗುವಾಗ ಉತ್ಸವದ ಕೆಳಗೆ ಮಲಗಿ ಹರಕೆ ತೀರಿಸುವ ಪದ್ಧತಿ ಇದೆ. ಮಕ್ಕಳು ಸೇರಿದಂತೆ ಹಿರಿಯರು ಕೂಡ ಈ ಉತ್ಸವದ ಕೆಳಗಡೆ ಮಲಗಿ ಹರಕೆ ತೀರಿಸುತ್ತಾರೆ. ಈ ಆಚರಣೆಯಲ್ಲಿ ಉತ್ಸವ ಹೊತ್ತವರು ಕೆಳಗೆ ಮಲಗಿದ್ದವರನ್ನು ದಾಟಿ ಹೋಗುತ್ತಾರೆ. ಆಗ ಭಕ್ತರ ಹರಕೆ ತೀರಿದಂತೆ ಆಗುತ್ತದೆ ಎಂಬ ನಂಬಿಕೆ ಇದೆ. ಆದರೆ ಈ ಆಚರಣೆಯಿಂದ ಪುಟ್ಟಪುಟ್ಟ ಮಕ್ಕಳ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ.
Advertisement
Advertisement
ಹಿಂದೂ, ಮುಸ್ಲಿಂ ಎಂಬ ಧರ್ಮ ಬೇಧವಿಲ್ಲದೆ ಎರಡೂ ಧರ್ಮದವರು ಒಂದಾಗಿ ಈ ಉತ್ಸವ ಆಚರಿಸೋದು ವಿಶೇಷ. ಈ ಉತ್ಸವದಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಹೀಗಾಗಿ ನೂಕು ನುಗ್ಗಲು, ತಳ್ಳಾಟ ಇರುತ್ತದೆ. ಪರಿಣಾಮ ಕೆಳಗೆ ಮಲಗಿದವರ ಮೇಲೆ ಯಾವುದೇ ಕ್ಷಣದಲ್ಲೂ ಕಾಲ್ತುಳಿತ ನಡೆಯಬಹುದು. ಆದರೂ ಯಾವುದೇ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳದೇ ಈ ಅಪಯಕಾರಿ ಆಚರಣೆ ನಡೆಯುತ್ತಿದೆ. ಇದನ್ನು ಕಂಡೂ ಕಾಣದಂತೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ.
Advertisement
Advertisement
ಈ ರೀತಿ ಆಚರಣೆ ಮಾಡುವುದು ಭಕ್ತರ ಪದ್ಧತಿ, ಸಂಪ್ರದಾಯವೇ ಇರಬಹುದು. ಆದರೆ ಸಾವಿರಾರು ಜನ ಸೇರುವ ಉತ್ಸವದಲ್ಲಿ ಹೀಗೆ ನೆಲದ ಮೇಲೆ ಮಲಗಿ ಹರಕೆ ತೀರುಸುವಾಗ ಸಾವು, ನೋವುಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ರೀತಿ ಆಚರಣೆ ಮಾಡುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.