ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿ ವಿವಾದವಾದ ಹಿನ್ನೆಲೆಯಲ್ಲಿ ಇದೀಗ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ (Marikamba Temple) ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಹಿಂದೂ ಜನ ಜಾಗೃತಿ ಸಮಿತಿಯಿಂದು ಆಡಳಿತ ಸಮಿತಿಗೆ ಮನವಿ ಮಾಡಿದ್ದಾರೆ.
ಹಿಂದೂ ಸಂಸ್ಕೃತಿ ಪ್ರಕಾರ ಉಡುಪು ಧರಿಸಿ ದೇವಸ್ಥಾನಕ್ಕೆ ಬರುವುದಕ್ಕೆ ಮಾತ್ರ ಅವಕಾಶ ನೀಡಬೇಕು. ಅರೆಬರೆ ಬಟ್ಟೆ ಧರಿಸಿ ದೇವಸ್ಥಾನದ ಒಳಗೆ ಬರುವುದಕ್ಕೆ ಅವಕಾಶ ನೀಡಬಾರದು. ಅರೆಬರೆ ಬಟ್ಟೆ ಧರಿಸಿ ಬರುವುದರಿಂದ ದೇವಸ್ಥಾನ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ. ಈ ಕಾರಣದಿಂದ ವಸ್ತ್ರಸಂಹಿತೆ ಜಾರಿ ಮಾಡುವಂತೆ ಆಡಳಿತ ಮಂಡಳಿಗೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ ಮಾಡಿದೆ.
Advertisement
Advertisement
ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಈಗ ಹೇಗಿದೆ?: ಶಿರಸಿ (Sirsi) ಮಾರಿಕಾಂಬಾ ದೇವಸ್ಥಾನದಲ್ಲಿ ಜಾತಿ, ಕುಲ ಎನ್ನದೇ ದೇವಸ್ಥಾನಕ್ಕೆ ಪ್ರವೇಶವನ್ನು ಆಡಳಿತ ಮಂಡಳಿ ಕಲ್ಪಿಸಿಕೊಟ್ಟಿದೆ. ಹೆಚ್ಚಾಗಿ ಭಕ್ತರು ಬಂದಾಗ ಪಂಚೆ, ಲುಂಗಿ, ಪ್ಯಾಂಟ್ ಧರಿಸಿ ಹೋಗುವ ಪುರುಷರಿಗೆ ಹಾಗೂ ಸೀರೆ, ಚೂಡಿದಾರ, ಪ್ಯಾಂಟ್ ಧರಿಸಿದ ಮಹಿಳೆಯರಿಗೂ ಜಾತಿ ಕೇಳದೇ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ದೇವಸ್ಥಾನದ ಗರ್ಭಗುಡಿಯೊಳಗೆ ಅರ್ಚಕರಿಗೆ ಹೊರತುಪಡಿಸಿ ಯಾರಿಗೂ ಪ್ರವೇಶ ಇರುವುದಿಲ್ಲ.
Advertisement
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಹೇಗಿದೆ?: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ (Temple) ಒಳಗೆ ಪ್ರವೇಶಿಸಲು ಪುರುಷರು ಕಡ್ಡಾಯವಾಗಿ ಪಂಚೆ, ಶಲ್ಯ ಧಾರಣೆ ಮಾಡಿರಬೇಕು. ಮಹಿಳೆಯರು ಸೀರೆವುಟ್ಟಿರಬೇಕು. ಹೀಗಿದ್ದರೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶವನ್ನು ನೀಡಲಾಗುತ್ತದೆ. ಜೊತೆಗೆ ದೇವರ ಆತ್ಮಲಿಂಗ ಸ್ಪರ್ಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಬರ್ಬರ ಕೊಲೆ- ನಾಲ್ವರು ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ ಮಾದಕ ವ್ಯಸನಿ
Advertisement
ಆದರೆ ಈ ಹಿಂದೆ ಕುಮಟಾ ತಾಲೂಕಿನ ಗೋಕರ್ಣ (Gokarna) ಮಹಾಬಲೇಶ್ವರ ದೇವಸ್ಥಾನದ ಒಳಗೆ ಸೀಮಿತವಾಗಿದ್ದ ವಸ್ತ್ರಸಂಹಿತೆ ರಥ ಬೀದಿಗೂ ಸಹ ವಿಸ್ತರಿಸಿತ್ತು. ರಥಬೀದಿಯಲ್ಲಿ ಜನರು ಅರೆಬರೆ ಬಟ್ಟೆ ಹಾಕಿ ಸಂಚರಿಸದಂತೆ ಆಡಳಿತ ಕಮಿಟಿ ನಿಷೇಧ ಹೇರಿತ್ತು. ಈ ಕುರಿತು ಜನರ ವಿರೋಧ ಬೆನ್ನಲ್ಲೇ ಜಿಲ್ಲಾಧಿಕಾರಿ ಸೂಚನೆ ಮೇಲೆ ರಸ್ತೆಗೆ ಹಾಕಿದ್ದ ನಾಮಫಲಕವನ್ನು ತೆಗೆದುಹಾಕಲಾಗಿತ್ತು. ನಂತರ ವಿವಾದ ತಣ್ಣಗಾಗುವ ಹೊತ್ತಲ್ಲೇ ಇದೀಗ ಹಿಂದೂ ಜನಜಾಗೃತಿ ವೇದಿಕೆ ಐತಿಹಾಸಿಕ ಹಿನ್ನೆಲೆ ಇರುವ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ವಸ್ತ್ರ ಸಂಹಿತೆ ಜಾರಿ ಮಾಡಲು ಮನವಿ ಸಲ್ಲಿಸಿದ್ದು, ಆಡಳಿತ ಮಂಡಳಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: JDS ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ಸಂಪೂರ್ಣ ಸಾಲ ಮನ್ನಾ: HDK