ಮಂಗಳೂರು: ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದ ಯುವತಿಯನ್ನು ಹಿಂದೂ ಜಾಗರಣ ವೇದಿಕೆ ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಅಮೀರ್ ಎಂಬಾತ ಪ್ರೀತಿಸಿದ್ದ. ಈ ನಡುವೆ ಅಮೀರ್ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ. ಕೂಡಲೇ ಎಚ್ಚತ್ತುಕೊಂಡ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಯುವತಿಯನ್ನು ಸಂಪರ್ಕಿಸಿ ಮನವೊಲಿಸಲು ಯತ್ನಿಸಿದ್ದಾರೆ.
ಯುವತಿ ಮುಸ್ಲಿಂ ಯುವಕನನ್ನು ಬಿಡಲು ಒಪ್ಪಿರಲಿಲ್ಲ. ನಿನ್ನನ್ನು ಪ್ರೀತಿಸುವ ನಾಟಕವಾಡಿ ನಡುದಾರಿಯಲ್ಲಿ ಕೈಬಿಟ್ಟು ಹೋಗುತ್ತಾನೆ ಎಂದು ಕಾರ್ಯಕರ್ತರು ಹೇಳಿದ್ದರೂ ಯುವತಿ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗೆ ಕಾರ್ಯಕರ್ತರೊಬ್ಬರು ಯುವತಿಯನ್ನ ಫೋನ್ ಮೂಲಕ ಸಂಪರ್ಕಿಸಿ ಮನವೊಲಿಸುವ ಆಡಿಯೋ ಲಭ್ಯವಾಗಿದೆ.
ಕೊನೆಗೆ ಬಜರಂಗದಳದ ಮಹಿಳಾ ಸಂಘಟನೆ ದುರ್ಗಾ ವಾಹಿನಿ ಸದಸ್ಯರು ಯುವತಿಯ ಮನೆಗೆ ತೆರಳಿ ಮನವೊಲಿಸಿದ್ದಾರೆ. ಗಾಂಜಾ ವ್ಯಸನಿಯನ್ನ ಪ್ರೀತಿಸುವುದು ಬೇಡ ಅಂದಿದ್ದಕ್ಕೆ ಯುವತಿ ಕೊನೆಗೂ ಒಪ್ಪಿದ್ದಾಳೆ. ತನ್ನ ತಪ್ಪಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾಳೆ. ಯುವಕ ಅಮಿರ್ ಸದ್ಯಕ್ಕೆ ಮಂಗಳೂರಿನ ಕದ್ರಿ ಪೊಲೀಸರ ಬಂಧನದಲ್ಲಿದ್ದಾನೆ.