ಮಂಗಳೂರು: ಬಿಜೆಪಿ ನಾಯಕರಿಂದ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ ಎಂದು ಹೇಳುವ ಮೂಲಕ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಎಡವಟ್ಟು ಮಾಡಿಕೊಂಡಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಸಂಸದ ಶ್ರೀರಾಮುಲು, ಮೊನ್ನೆ ಮೊನ್ನೆ ಶೋಭಾ ಕರಂದ್ಲಾಜೆ, ಬಿ.ಎಸ್ ಯಡಿಯೂರಪ್ಪ ಮತ್ತು ಸದಾನಂದ ಗೌಡ ಅವರು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವಂತಹ ಕೆಲಸ ಮಾಡಿದರು. ಇದನ್ನು ನೀವೆಲ್ಲರೂ ನೋಡಿದ್ದೀರಿ ಎಂದು ಹೇಳಿದ್ದಾರೆ.
Advertisement
ಕರಾವಳಿಯ ಕೊಲೆ ರಾಜಕೀಯದ ಬಗ್ಗೆ ಮಾತನಾಡುವ ಭಾಷಣ ಮಾಡುವ ಮಾತಿನ ಭರದಲ್ಲಿ ಸಂಸದ ಶ್ರೀ ರಾಮುಲು ಅವರು ಏನೋ ಹೇಳಲು ಹೋಗಿ ಇನ್ನೇನೋ ಹೇಳಿಬಿಟ್ಟಿದ್ದಾರೆ. ಮರು ಕ್ಷಣವೇ ತಮ್ಮ ಹೇಳಿಕೆ ಬಗ್ಗೆ ಎಚ್ಚೆತ್ತಾ ಅವರು ಕರ್ನಾಟಕದಲ್ಲಿ ಜಾತಿ ವಿಭಜನೆ ಮಾಡುವ ಹಾಗೂ ಆರ್‍ಎಸ್‍ಎಸ್, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.
Advertisement
ಸಂಸದ ಶ್ರೀ ರಾಮುಲು ಅವರ ಮಾತನ್ನು ಕೇಳಿ ವೇದಿಕೆ ಮೇಲಿದ್ದ ಬಿಜೆಪಿ ಮುಖಂಡರು ಕ್ಷಣ ಕಾಲ ಕಂಗಾಲು ಆಗಿದ್ದರು.
Advertisement
https://www.youtube.com/watch?v=dwZiNKvyUug
Advertisement
Sri. @BSYBJP and other senior leaders received a warm welcome as the #ParivartanaYatre entered Sullia, Dakshina Kannada. pic.twitter.com/DJ0Q9ZbvlN
— BJP Karnataka (@BJP4Karnataka) November 10, 2017
Braving hot sun, thousands of women gather in large numbers to welcome #ParivartanaYatra & hear Sri. @BSYBJP and other senior leaders at Putturu, Dakshina Kannada. pic.twitter.com/MX9KHy8eSV
— BJP Karnataka (@BJP4Karnataka) November 10, 2017
It was ocean of @BJP4India party workers at #Sullia #ParivartanaYatre must watch video pic.twitter.com/Lj3tkSQNng
— Sadananda Gowda (@DVSadanandGowda) November 10, 2017
ಕುಕ್ಕೆಸುಬ್ರಹ್ಮಣ್ಯನ ದರ್ಶನ ಪಡೆದು ಇಂದು ಕೆಲಸ ಆರಂಭಿಸಿದ್ದೇನೆ. ಸುಳ್ಯದಲ್ಲಿ ಇಷ್ಟು ದೊಡ್ಡ ಹಾಗೂ ಶಿಸ್ತುಬದ್ಧವಾದ ಸಭೆಯಲ್ಲಿ ಭಾಗವಹಿಸುತ್ತಿರುವುದು ಸದಾ ನೆನಪಿನಲ್ಲುಳಿಯುತ್ತದೆ. ಸುಬ್ರಹ್ಮಣ್ಯ ದೇವರ ಹಾಗೂ ನಿಮ್ಮ ಆಶೀರ್ವಾದದಿಂದ ನಮ್ಮ ಶಕ್ತಿ ಇಮ್ಮಡಿಸಲಿ ಎಂದು ಆಶಿಸುತ್ತೇನೆ.#ParivartanaYatre #Sullia
— B.S.Yediyurappa (@BSYBJP) November 10, 2017
ಒಂದು ದಿನದ ಬಿಡುವಿನ ನಂತರ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪರಿವರ್ತನಾ ಯಾತ್ರೆಯ ಸಭೆಯಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸುತ್ತಿರುವುದು.
Received a warm welcome as the #ParivartanaYatre entered Sullia, Dakshina Kannada. pic.twitter.com/oDabv3zMJl
— B.S.Yediyurappa (@BSYBJP) November 10, 2017