ಬೆಂಗಳೂರು: ಮಾತೃ ಭಾಷೆ ಕನ್ನಡ ಮೊದಲು ಇರಬೇಕು, ಆ ಬಳಿಕ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆ ಹಿಂದಿ ಇರಬೇಕು ನಂತ್ರ ವಿಶ್ವದಲ್ಲಿ ಹೆಚ್ಚು ಮಾತನಾಡುವ ಭಾಷೆ ಇಂಗ್ಲೀಷ್ ಇರಬೇಕು ಎಂದು ಹೇಳುವ ಮೂಲಕ ಮೆಟ್ರೋನಲ್ಲಿ ಹಿಂದಿ ಭಾಷೆ ಹೇರಿಕೆಯನ್ನ ಕೇಂದ್ರ ಸಚಿವ ಸದಾನಂದ ಗೌಡ ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಕರ್ನಾಟಕಕ್ಕೆ ಮಾತ್ರ ಸೀಮಿತ ಅಲ್ಲ. ವಿಶ್ವದಲ್ಲಿಯೇ ಬೆಂಗಳೂರು ಪ್ರಸಿದ್ಧಿ ಹಾಗಾಗಿ ತ್ರಿಭಾಷಾ ಸೂತ್ರ ಇರಲೇಬೇಕು ಎಂದು ಡಿವಿಎಸ್ ಹೇಳಿದ್ದಾರೆ.
Advertisement
Advertisement
ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಮೆಟ್ರೋದಲ್ಲಿ ತ್ರಿಭಾಷ ಸೂತ್ರ ಅಳವಡಿಕೆ ಸಾಧ್ಯವಿಲ್ಲ ಎಂಬುವುದರ ಬಗ್ಗೆ 2016ರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ರು. ಈ ವಿಚಾರವಾಗಿ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವಂತೆ ಆಗ್ರಹಿಸಿದ್ರು.
Advertisement
ಆದೇ 2017ರಲ್ಲಿ ಕರೋಲಾ ಊಲ್ಟಾ ಹೊಡೆದಿದ್ದಾರೆ. ಈಗ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಅನುದಾನವಿರೋದ್ರಿಂದ ನಾವು ಹಿಂದೆ ಹಾಕಬೇಕು ಅಂತಾ ತಿಳಿಸಿದ್ದಾರೆ. ಈ ವಿಚಾರ ಕನ್ನಡ ಪರ ಸಂಘಟನೆಗಳ ಆಕ್ರೊಶಕ್ಕೆ ಕಾರಣವಾಗಿದ್ದು, ಕರವೇ ಅಧ್ಯಕ್ಷ ನಾರಾಯಣ ಗೌಡ ಇದಕ್ಕೆ ಕರೋಲಾ ಅವರ ಹಿಂದಿ ಪ್ರೇಮವೇ ಕಾರಣ ಹಾಗಾಗಿ ಕರೋಲ ಅವರನ್ನು ರಾಜ್ಯದಿಂದ ಹೊರ ಹಾಕುವಂತೆ ಕಿಡಿಕಾರಿದ್ದಾರೆ.
Advertisement
ಒಟ್ಟಾರೆ, ಮೆಟ್ರೋನಲ್ಲಿ ಹಿಂದಿ ಸದ್ಯ ಭಾಷಾ ವಿವಾದಕ್ಕೆ ಕಾರಣವಾಗಿದೆ. ಹಿಂದಿ ಪ್ರಿಯರ ಓಲೈಕೆಗಾಗಿ ಕನ್ನಡಕ್ಕೆ ಅವಮಾನ ಮಾಡ್ಬೇಡಿ ಅನ್ನೋದು ಕನ್ನಡ ಸಂಘಟನೆಗಳ ಆಗ್ರಹವಾಗಿದೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಧ್ಯಾನ್ಯತೆ . ಕನ್ನಡ ಕಲಿಯಿರಿ ಇನ್ನುಳಿದ ಭಾರತೀಯ ಭಾಷೆ ಗಳನ್ನೂ ಗೌರವಿಸಿ https://t.co/wL896SMKvo
— Sadananda Gowda (@DVSadanandGowda) July 6, 2017