ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ರಜನಿಕಾಂತ್ ಅವರ ಸರಳತೆಯನ್ನು ಹಾಡಿಹೊಗಳಿದ್ದಾರೆ. ಈ ಹಿಂದೆ ’ಹಮ್’ (Hum) ಸಿನಿಮಾದ ಶೂಟಿಂಗ್ ಬಿಡುವಿನ ಸಮಯದಲ್ಲಿ ರಜನಿಕಾಂತ್ ಅವರು (Rajanikanth) ನೆಲದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಅವರ ಸರಳತೆಯ ಬಗ್ಗೆ ಬಿಗ್‌ಬಿ ಬಣ್ಣಿಸಿದ್ದಾರೆ. ಇದನ್ನೂ ಓದಿ:ಗಾಯಕಿ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಜಯಂ ರವಿ?- ಸ್ಪಷ್ಟನೆ ನೀಡಿದ ನಟ
‘ವೆಟ್ಟೈಯಾನ್’ ಸಿನಿಮಾಗಾಗಿ 33 ವರ್ಷಗಳ ನಂತರ ರಜನಿಕಾಂತ್ ಮತ್ತು ತಲೈವಾ ಒಂದಾಗಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಇನ್ನೂ ಇತ್ತೀಚೆಗೆ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ರಜನಿಕಾಂತ್, ಮಂಜು ವಾರಿಯರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಆದರೆ ಬಿಗ್‌ಬಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಆದರೆ ತಲೈವಾ ಕುರಿತು ಸೀಕ್ರೆಟ್‌ವೊಂದನ್ನು ರಿವೀಲ್ ಮಾಡಿರುವ ವಿಡಿಯೋವೊಂದನ್ನು ಚಿತ್ರತಂಡಕ್ಕೆ ಕಳುಹಿಸಿ ‘ಹಮ್’ ಸಿನಿಮಾ ಚಿತ್ರೀಕರಣದ ಬಗ್ಗೆ ನಟ ಸ್ಮರಿಸಿದ್ದಾರೆ.
1991ರಲ್ಲಿ ತೆರೆಕಂಡ ‘ಹಮ್’ ಸಿನಿಮಾದಲ್ಲಿ ನಾನು ಮತ್ತು ತಲೈವಾ ಜೊತೆಯಾಗಿ ನಟಿಸಿದ್ದೇವೆ. ಆಗ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಸಿಕ್ಕಾಗ ನಾನು ನನ್ನ ಎಸಿ ಇರುವ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ, ರಜನಿಕಾಂತ್ ಅವರು ನೆಲದ ಮೇಲೆ ಮಲಗುತ್ತಿದ್ದರು. ಆಗ ಅವರು ತುಂಬಾ ಸಿಂಪಲ್ ಆಗಿರೋದನ್ನು ನೋಡಿ, ನಾನು ವಾಹನದಿಂದ ಹೊರಗೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೆ ಎಂದು ಬಿಗ್‌ಬಿ ವಿವರಿಸಿದ್ದಾರೆ. ‘ವೆಟ್ಟೈಯಾನ್’ ಸಿನಿಮಾ ಮೂಲಕ ಮತ್ತೊಮ್ಮೆ ತಲೈವಾ ಜೊತೆ ನಟಿಸಿರೋದು ಖುಷಿಯಿದೆ ಎಂದು ಬಿಗ್‌ಬಿ ಮಾತನಾಡಿದ್ದಾರೆ.
ಅಂದಹಾಗೆ, ’ವೆಟ್ಟೈಯಾನ್’ ಸಿನಿಮಾ ಇದೇ ಅಕ್ಟೋಬರ್ 10ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ರಜನಿಕಾಂತ್, ಬಿಗ್‌ಬಿ ಜೊತೆ ಮಂಜು ವಾರಿಯರ್, ರಿತಿಕಾ ಸಿಂಗ್, ರಾಣಾ ದಗ್ಗುಭಾಟಿ ಸೇರಿದಂತೆ ಅನೇಕರು ನಟಿಸಿದ್ದಾರೆ.