ನವದೆಹಲಿ: ಹಿಂಡೆನ್‍ಬರ್ಗ್ ವರದಿ (Hindenburg Report) ಯಿಂದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಅದಾನಿ ಕಂಪನಿಗಳ ಷೇರುಗಳಲ್ಲಿನ ಕುಸಿತ ಮುಂದುವರಿದಿದೆ. ಕಳೆದೊಂದು ತಿಂಗಳಲ್ಲಿ ಅದಾನಿ ಸಂಸ್ಥೆಯ 10 ಕಂಪನಿಗಳ ಹೂಡಿಕೆಯು ನೆಲಕಚ್ಚಿದ್ದು ಗೌತಮ್ ಅದಾನಿ (Gautam Adani) ಗೆ 12 ಲಕ್ಷ ಕೋಟಿ ನಷ್ಟವಾಗಿದೆ.
ಅದಾನಿ ಗ್ರೂಪ್‍ನ ಮಾರುಕಟ್ಟೆ ಬಂಡವಾಳವು ಜನವರಿ 24 ರ ಮೊದಲು ಸರಿಸುಮಾರು 19 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಅಮೆರಿಕ ಮೂಲದ ಹಿಂಡೆನ್‍ಬರ್ಗ್ ಸ್ಫೋಟಕ ವರದಿ ಬಿಡುಗಡೆ ಮಾಡಿದ ನಂತರ ಅದರ ಮೌಲ್ಯ ಸರಿ ಸುಮಾರು 7.2 ಲಕ್ಷ ಕೋಟಿಗೆ ಕುಸಿದಿದೆ.
Advertisement
Advertisement
ಅದಾನಿ ಕಂಪನಿಯ ಏಳು ಪ್ರಮುಖ ಪಟ್ಟಿಮಾಡಿದ ಕಂಪನಿಗಳು 85 ಪ್ರತಿಶತದಷ್ಟು ಕುಸಿತ ಕಂಡಿವೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟ್ರಾನ್ಸ್ ಮಿಷನ್ ನಲ್ಲಿ ಭಾರೀ ನಷ್ಟ ಸಂಭವಿಸಿದ್ದು, ಕೇವಲ ಒಂದು ತಿಂಗಳಲ್ಲಿ ಸುಮಾರು 80 ಪ್ರತಿಶತದಷ್ಟು ಷೇರಿನ ಮೌಲ್ಯ ಕುಸಿದಿದೆ. 52 ವಾರಗಳ ಕನಿಷ್ಠ ಮೌಲ್ಯ ತಲುಪಿವೆ.
Advertisement
ವರದಿಯಲ್ಲಿ ಏನಿತ್ತು?: ಎರಡು ವರ್ಷಗಳ ತನಿಖೆಯ ನಂತರ ಹಿಂಡೆನ್‍ಬರ್ಗ್ ವರದಿ ಪ್ರಕಟವಾಗಿತ್ತು. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿತ್ತು. ಇದನ್ನೂ ಓದಿ: ಹಿಂಡೆನ್‌ಬರ್ಗ್ ಎಫೆಕ್ಟ್ – 9.91 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿಗೆ ಇಳಿಯಿತು ಅದಾನಿ ಸಂಪತ್ತು
Advertisement
ಅದಾನಿ ಗ್ರೂಪ್ (Adani Group) ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ ಎಂದು ಹೇಳಿತ್ತು. ಅದಾನಿ ಗ್ರೂಪ್ ಭಾರೀ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಜನವರಿ 24 ರಂದು ಹಿಂಡೆನ್‍ಬರ್ಗ್‍ನಿಂದ ವರದಿಯನ್ನು ಬಿಡುಗಡೆ ಮಾಡಿದಾಗ, ವರದಿಯು ಅದಾನಿ ಕಂಪನಿ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಮತ್ತು ಷೇರುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತವೆ ಎಂದು ವಿಶ್ಲೇಷಕರು ಹೇಳಿದ್ದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k