ಅದಾನಿ ಷೇರುಗಳಿಗೆ ಹಿಂಡನ್‌ಬರ್ಗ್ ರಿಪೋರ್ಟ್ ಶಾಕ್ – ಹಗರಣದಲ್ಲಿ ಸೆಬಿ ಅಧ್ಯಕ್ಷೆ ಭಾಗಿ ಆರೋಪ

Public TV
1 Min Read
adani group

ನವದೆಹಲಿ: ಭಾರತದ ಷೇರುಮಾರುಕಟ್ಟೆಯ SEBI (ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ) ಅಧ್ಯಕ್ಷೆ ಮಾಧವಿ ಪೂರಿ ಬುಚ್ ವಿರುದ್ಧ ಅಮೆರಿಕಾದ ಶಾರ್ಟ್ ಸೆಲ್ಲರ್ ಹಿಂಡನ್‌ಬರ್ಗ್ (Hindenburg) ರಿಸರ್ಚ್ ಗಂಭೀರ ಆರೋಪ ಮಾಡಿದೆ.

ಅದಾನಿ ಕಂಪನಿಯ (Adani Group) ಅವ್ಯವಹಾರದಲ್ಲಿ ಮಾಧವಿ ಬುಚ್ (Madhabi Puri Buch), ಪತಿ ಧವಲ್ ಬುಚ್ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದೆ. ಆದರೆ, ಅದಾನಿ ಸಮೂಹವು ಹಿಂಡನ್‌ಬರ್ಗ್ ಆರೋಪಗಳನ್ನು ತಳ್ಳಿಹಾಕಿದೆ. ಇದೆಲ್ಲವೂ ದುರುದ್ದೇಶಪೂರಿತವಾಗಿದೆ. ವೈಯಕ್ತಿಕ ಲಾಭಕ್ಕಾಗಿ ಮಾಹಿತಿಗಳನ್ನು ತಿರುಚಲಾಗುತ್ತಿದೆ ಎಂದು ಹೇಳುವ ಮೂಲಕ ಆರೋಪಗಳನ್ನು ತಿರಸ್ಕರಿಸಿದೆ. ಇದನ್ನೂ ಓದಿ: ಅಮರನಾಥ್ ಯಾತ್ರೆ ತಾತ್ಕಾಲಿಕ ರದ್ದು

Madhabi Puri Buch

ಸೆಬಿ ಅಧ್ಯಕ್ಷೆ ಮಾಧವಿ ಪೂರಿ ಬುಚ್ ಹಾಗೂ ಪತಿ ಸಹಾ ತಮ್ಮ ವಿರುದ್ಧದ ಆರೋಪಗಳು ಆಧಾರರಹಿತ ಎಂದು ಹೇಳುವ ಮೂಲಕ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಅದಾನಿ ಷೇರು ಹಗರಣದಲ್ಲಿ ಬುಚ್‌ ಮತ್ತು ಅವರ ಪತಿ ಭಾಗಿಯಾಗಿದ್ದಾರೆ. ಗೌತಮ್‌ ಅದಾನಿ ಅವರ ಸಾಗರೋತ್ತರ ಹೂಡಿಯಲ್ಲಿ ಇವರಿಬ್ಬರು ಪಾಲುದಾರರಾಗಿದ್ದಾರೆ. ಅದಾನಿ ಅವರು ಮಾರಿಷಸ್‌ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ಶೆಲ್‌ ಕಂಪೆನಿಗಳ ಬಗ್ಗೆ ತನಿಖೆ ನಡೆಸಲು ಸೆಬಿ ಆಸಕ್ತಿ ತೋರದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ಹಿಂಡನ್‌ಬರ್ಗ್‌ ಆರೋಪಿಸಿದೆ. ಇದನ್ನೂ ಓದಿ: ಸರ್ಕಾರಿ ಕೆಲಸ ತಿರಸ್ಕರಿಸಿದ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಕಂಚು ಗೆದ್ದ ಸರಬ್ಜೋತ್‌ ಸಿಂಗ್‌

ಸೆಬಿ ಅಧ್ಯಕ್ಷೆ ಮಾಧವಿ ಯಾಕಿನ್ನೂ ರಾಜೀನಾಮೆ ಕೊಟ್ಟಿಲ್ಲ ಅಂತಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕು ಅಂತಾ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಈ ಮಧ್ಯೆ, ಮಾಧವಿ ಅವರು ಸ್ವಹಿತಾಸಕ್ತಿ ಏನೂ ಹೊಂದಿಲ್ಲ ಅಂತಾ ಸೆಬಿ ಸ್ಪಷ್ಟನೆ ನೀಡಿದೆ.

Share This Article