ಡೆಹ್ರಾಡೂನ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಧುನಿಕ ದಿನದ ಜಿನ್ನಾ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಪಾಕಿಸ್ತಾನದ ಪ್ರದೇಶದೊಳಗೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿರುವುದಕ್ಕೆ ಪುರಾವೆ ಕೇಳುತ್ತಾರೆ. ಆದರೆ ನಾವೆಂದೂ ಒಂದು ವೇಳೆ ನೀವು ನಿಜವಾಗಿಯೂ ರಾಜೀವ್ ಗಾಂಧಿಯ ಮಗ ರಾಹುಲ್ ಹೌದಾ ಅಥವಾ ಅಲ್ಲವೇ ಎಂದು ಹೇಳಿದ್ದೇವೆಯೇ ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.
Advertisement
Advertisement
ರಾಹುಲ್ ಗಾಂಧಿ ಭಾಷೆ ಮತ್ತು ಭಾಷಣ 1947ಕ್ಕಿಂತ ಹಿಂದಿನ ಜಿನ್ನಾ ಅವರಂತೆಯೇ ಇದೆ. ಒಂದು ರೀತಿಯಲ್ಲಿ ರಾಹುಲ್ ಗಾಂಧಿ ಆಧುನಿಕ ಜಿನ್ನಾ ರೀತಿ ವರ್ತಿಸುತ್ತಿರುವುದಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ
Advertisement
ಅಸ್ಸಾಂನಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಭಾರತವೆಂದರೆ ಗುಜರಾತ್‍ನಿಂದ ಪಶ್ಚಿಮ ಬಂಗಾಳದವರೆಗೆ ಮಾತ್ರ. ಕಳೆದ ಹತ್ತು ದಿನಗಳಿಂದ ಅವರು ಹೇಳುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಮ್ಮೆ ಅವರು ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಇನ್ನೊಂದು ಬಾರಿ ಭಾರತ ಎಂದರೆ ಗುಜರಾತಿನಿಂದ ಬಂಗಾಳದವರೆಗೆ ಎನ್ನುತ್ತಾರೆ. ಹೀಗಾಗಿ ರಾಹುಲ್ ಗಾಂಧಿಯಲ್ಲಿ ಜಿನ್ನಾ ದೆವ್ವ ಪ್ರವೇಶಿಸಿದೆ ಎಂದು ನಾನು ಹೇಳುತ್ತಿದ್ದೇನೆ ಎಂದಿದ್ದಾರೆ,