ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ನವೆಂಬರ್ 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆ (Election) ಹಿನ್ನೆಲೆಯಲ್ಲಿ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code) ತರುವುದಾಗಿ ಭರವಸೆಯನ್ನು ನೀಡಿದೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಮುಖವಾಗಿ ಮುಂದಿನ 5 ವರ್ಷದೊಳಗೆ ಏಕರೂಪ ಕಾನೂನನ್ನು ಜಾರಿಗೆ ತರುತ್ತೇವೆ. ಜೊತೆಗೆ ಹಿಮಾಚಲ ಪ್ರದೇಶದಲ್ಲಿ ವಕ್ಫ್ ಆಸ್ತಿಗಳ ಸಮೀಕ್ಷೆ ನಡೆಸುವುದಾಗಿ ಭರವಸೆ ನೀಡಿದೆ.
Advertisement
Advertisement
ಬಿಜೆಪಿಯ (BJP) ಪ್ರಣಾಳಿಕೆಯಲ್ಲಿರುವ ಇತರೆ ಅಂಶಗಳೆಂದರೆ ಮುಂದಿನ 5 ವರ್ಷಗಳಲ್ಲಿ 8 ಲಕ್ಷ ಉದ್ಯೋಗವಕಾಶ ನೀಡುವುದಾಗಿ ಭರವಸೆ ನೀಡಿದೆ. ರಾಜ್ಯದ ಪ್ರಮುಖ ಬೆಳೆ ಸೇಬುಗಳಿಗೆ ಪ್ಯಾಕೇಜಿಂಗ್‍ನಲ್ಲಿ ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‍ಟಿಯನ್ನು ಶೇಕಡಾ 18 ರಿಂದ 12ಕ್ಕೆ ಇಳಿಸುವುದು ಮತ್ತು ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. 33 ಮೀಸಲಾತಿ ನೀಡಲಾಗುವುದು ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನೂ ಓದಿ: ರೇಣುಕಾಚಾರ್ಯ ಸಹೋದರ ಪುತ್ರನ ಸಾವು ಪ್ರಕರಣ ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಸೂಚನೆ – ಸಿಎಂ
Advertisement
BJP National President Shri @JPNadda releases ‘BJP Sankalp Patra 2022’ in Shimla, Himachal Pradesh. #BJPVijaySankalp
https://t.co/sXZb9PwC65
— BJP (@BJP4India) November 6, 2022
Advertisement
ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda), 6 ರಿಂದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸೈಕಲ್, ಕಾಲೇಜು ಹುಡುಗಿಯರಿಗೆ ಸ್ಕೂಟರ್ ಮತ್ತು ಐದು ಹೊಸ ವೈದ್ಯಕೀಯ ಶಾಲೆಗಳ ಸ್ಥಾಪನೆಯ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ತಾಕತ್ ಇದ್ರೆ ನನ್ನನ್ನು ಮುಟ್ಟಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದಿದ್ದು ಸರಿಯಲ್ಲ – ರೇಣುಕಾಚಾರ್ಯ