ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ – ಗೆಲುವು ಯಾರಿಗೆ?

Public TV
2 Min Read
Himachal Pradesh Assembly Election 1 1

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ (Himachal Pradesh Assembly Election) ನಡೆಯುತ್ತಿದೆ. 68 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ (Election) ಈಗಾಗಲೇ ಆರಂಭಗೊಂಡಿದೆ. ಮತದಾನ ಸುಗಮವಾಗಿ ನಡೆಯಲು ಒಟ್ಟು 7,881 ಮತಗಟ್ಟೆಗಳನ್ನು ಸ್ಥಾಪಿಸಿದ್ದು ರಾಜ್ಯದಲ್ಲಿ ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. 981 ಮತಗಟ್ಟೆಗಳು ನಿರ್ಣಾಯಕವಾಗಿದ್ದರೆ 901 ಮತಗಟ್ಟೆಗಳು ದುರ್ಬಲವಾಗಿವೆ.

Himachal Pradesh Assembly Election

ಬೆಳಗ್ಗೆ 11 ಗಂಟೆ ವೇಳೆಗೆ 17.98% ರಷ್ಟು ಮತದಾನವಾಗಿದ್ದು, ಗುಡ್ಡಗಾಡು ಪ್ರದೇಶಗಳಲ್ಲೂ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ 232 ಫ್ಲೈಯಿಂಗ್ ಸ್ಕ್ವಾಡ್ ಮತ್ತು 232 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳನ್ನು ರಚಿಸಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ – ಮತದಾರರ ಕೈಯಲ್ಲಿ 412 ಅಭ್ಯರ್ಥಿಗಳ ಭವಿಷ್ಯ

Himachal Pradesh Assembly Election 3

ಆಡಳಿತರೂಢ ಬಿಜೆಪಿ (BJP) ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮೂಲಕ ರಾಜ್ಯದಲ್ಲಿರುವ ರಾಜಕೀಯ ಟ್ರೆಂಡ್ ಬದಲಿಸುವ ಲೆಕ್ಕಾಚಾರದಲ್ಲಿದೆ. ಇತ್ತ ಉಪ ಚುನಾವಣೆಗಳ ಗೆಲುವಿನ ಮೂಲಕ ವಿಶ್ವಾಸ ಹೆಚ್ಚಿಸಿರುವ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿದೆ. ಇದನ್ನೂ ಓದಿ: ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಆಟೋ ಪಲ್ಟಿ – ಜನರಿಂದ ತಪ್ಪಿಸಿಕೊಳ್ಳಲು ವಿದ್ಯುತ್ ಕಂಬ ಏರಿದ

Himachal Pradesh Assembly Election 1

ನವೆಂಬರ್ 2021 ರಲ್ಲಿ ರಾಜ್ಯದಲ್ಲಿ ನಾಲ್ಕು ಉಪಚುನಾವಣೆಗಳನ್ನು ಗೆದ್ದ ನಂತರ, ಕಾಂಗ್ರೆಸ್ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲೂ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ಆದರೆ ಪಕ್ಷದಲ್ಲಿನ ಆಂತರಿಕ ಕಲಹ ಮತ್ತು ರಾಷ್ಟ್ರೀಯ ನಾಯಕರ ಪ್ರಚಾರದ ಕೊರತೆಯಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಹಿಂದೆ ಬಿದ್ದಂತೆ ಕಂಡು ಬರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ಬಂಡಾಯದ ಬಿಸಿ ಕಂಡು ಬಂದಿದೆ. ಆಡಳಿತ ವಿರೋಧಿ ಅಲೆ ಮತ್ತು ಶಾಸಕರ ಮೇಲಿನ ಅತೃಪ್ತಿ ಕಾರಣದಿಂದ ಬಿಜೆಪಿ ಕೆಲವು ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಕಾಂಗ್ರೆಸ್ ಕೂಡಾ ಗೆಲವಿನ ದಡ ಸೇರಲು ಅಭ್ಯರ್ಥಿಗಳ ಆಯ್ಕೆಯಲ್ಲಿ ಮುತುವರ್ಜಿ ವಹಿಸಿದ್ದು ಕೆಲವು ಕ್ಷೇತ್ರಗಳಲ್ಲಿ ಬಂಡಾಯಕ್ಕೆ ಕಾರಣವಾಗಿದೆ.

Himachal Pradesh Assembly Election 2

ಆಮ್ ಅದ್ಮಿ (AAP) ಮೊದಲ ಬಾರಿ ಚುನಾವಣಾ ಕಣದಲ್ಲಿದ್ದು ಅಬ್ಬರದ ಪ್ರಚಾರ ನಡೆಸಿದೆ. ಆದರೆ ಅದು ಎರಡಂಕಿಯ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ. ಅದಾಗ್ಯೂ ಈ ಬಾರಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *