ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಕಾಂಗ್ರೆಸ್ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಏರಿದೆ. ಆದರೆ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಡುವಿನ ಒಟ್ಟು ಮತದ ಕೇವಲ ಶೇ.0.9 ಆಗಿರುವುದು ಗಮನಾರ್ಹ ವಿಷಯ.
Advertisement
ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಬಿಜೆಪಿ ಒಟ್ಟು 18,14,530(ಶೇ.43) ಮತಗಳನ್ನು ಪಡೆದರೆ ಕಾಂಗ್ರೆಸ್ 18,52,504(ಶೇ.43.9) ಮತಗಳನ್ನು ಪಡೆದಿದೆ. ಒಟ್ಟು ಮತಗಳ ಲೆಕ್ಕಾಚಾರವನ್ನು ಪರಿಗಣಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಅಂತರ 37,974. ಪಕ್ಷೇತರರು, ಆಪ್, ಬಿಎಸ್‌ಪಿ, ಸಿಪಿಐ, ನೋಟಾ, ಇತರರಿಗೆ ಒಟ್ಟು 4,38,413(ಶೇ.10.39) ಮತಗಳು ಬಿದ್ದಿದೆ. ಇದನ್ನೂ ಓದಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಭದ್ರಕೋಟೆಯಲ್ಲಿ ಶೂನ್ಯ ಸುತ್ತಿದ ಬಿಜೆಪಿ
Advertisement
Advertisement
ಒಟ್ಟು 68 ಸ್ಥಾನಗಳಿರುವ ಹಿಮಾಚಲದಲ್ಲಿ ಬಹುಮತಕ್ಕೆ 35 ಬೇಕು. ಕಾಂಗ್ರೆಸ್ 40 ಸ್ಥಾನ ಗೆದ್ದರೆ ಬಿಜೆಪಿ 25, ಇತರರು 3 ಕ್ಷೇತ್ರಗಳನ್ನು ಗೆದ್ದಿದ್ದಾರೆ.
Advertisement
2017ರಲ್ಲಿ ಬಿಜೆಪಿ 44 ಸ್ಥಾನ ಗೆದ್ದರೆ ಕಾಂಗ್ರೆಸ್ 21, ಇತರರು 3 ಸ್ಥಾನಗಳನ್ನು ಗೆದ್ದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಶೇ.48.8, ಕಾಂಗ್ರೆಸ್ ಶೇ. 41.7, ಇತರರಿಗೆ ಶೇ.9.5 ರಷ್ಟು ಮತ ಬಿದ್ದಿತ್ತು.
ಗುರುವಾರ ಸಂಜೆ ದೆಹಲಿ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಭಾಷಣ ಮಾಡಿದ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿ ಬಿಜೆಪಿ, ಕಾಂಗ್ರೆಸ್ ನಡುವಿನ ಅಂತರ ಶೇ.1 ಆಗಿದೆ ಎಂದು ಹೇಳಿದ್ದರು.