ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಆರ್ಥಿಕ ಸಂಕಷ್ಟ ಶುರುವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ ತಿಂಗಳ ವೇತನ ಜಮೆಯಾಗಿಲ್ಲ. ಆಗಸ್ಟ್ ತಿಂಗಳ ವೇತನವನ್ನು ಇನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿದೆ. ವೇತನ ವಿಳಂಬದಿಂದ ಎರಡು ಲಕ್ಷಕ್ಕೂ ಹೆಚ್ಚು ರಾಜ್ಯ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.
ವೇತನ ವಿಳಂಬವಾಗಿದ್ದರೂ, ವೇತನವನ್ನು ಯಾವಾಗ ವಿತರಿಸಲಾಗುವುದು ಎಂಬ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಪ್ರಸ್ತುತ ಆರ್ಥಿಕ ಸ್ಥಿತಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ಆರೋಪಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಭಾಷಣ ಮಾಡಿದ ಸುಖು ಅವರು ಆರ್ಥಿಕ ಅವ್ಯವಸ್ಥೆಗೆ ಬಿಜೆಪಿ ಪ್ರಾರಂಭಿಸಿದ ಉಚಿತ ಕೊಡುಗೆಗಳ ಸಂಸ್ಕೃತಿ ಕಾರಣ ಎಂದು ದೂಷಿಸಿದರು. ಇದನ್ನೂ ಓದಿ: ದರ್ಶನ್ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ
- Advertisement -
- Advertisement -
ಆರ್ಥಿಕ ಪರಿಸ್ಥಿತಿ ಹಾಳಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಸುಖವಿಂದರ್ ಸಿಂಗ್ ಸುಖು, ತಮ್ಮ ಸರ್ಕಾರವು ರಾಜ್ಯದ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ವಿವಿಧ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ನನ್ನ ಎಲ್ಲಾ ಕೆಲಸಗಳು 2027 ರ ವೇಳೆಗೆ ಹಿಮಾಚಲ ಪ್ರದೇಶವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಮತ್ತು 2032 ರ ವೇಳೆಗೆ ದೇಶದ ಅತ್ಯಂತ ಶ್ರೀಮಂತ ರಾಜ್ಯವಾಗಿಸಲು ಕೇಂದ್ರೀಕೃತವಾಗಿವೆ ಎಂದು ಹೇಳಿದರು.
- Advertisement -
ರಾಜ್ಯದಲ್ಲಿ ಯಾವುದೇ ಆರ್ಥಿಕ ಅವ್ಯವಸ್ಥೆ ಇಲ್ಲ. ನೌಕರರು ಮತ್ತು ಪಿಂಚಣಿದಾರರು ತಮ್ಮ ಬಾಕಿಯನ್ನು ಪಡೆಯುತ್ತಿದ್ದಾರೆ. 75 ವರ್ಷಕ್ಕಿಂತ ಮೇಲ್ಪಟ್ಟ 28,000 ಪಿಂಚಣಿದಾರರ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಸರ್ಕಾರವು ವಿವಿಧ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಇದೇ ವೇಳೆ ತಿಳಿಸಿದರು. ಇದನ್ನೂ ಓದಿ: ಜೈಲಿನಲ್ಲಿ ಕೊನೆಗೂ ದರ್ಶನ್ ಗೆ ಸಿಕ್ತು ಸರ್ಜಿಕಲ್ ಚೇರ್ ಭಾಗ್ಯ
- Advertisement -
ಮದ್ಯ ಮಾರಾಟದ ಹರಾಜಿನಲ್ಲಿನ ಅಕ್ರಮಗಳ ಆರೋಪಗಳು ಸುಳ್ಳು. ಬಿಜೆಪಿ ನಾಯಕರು ಸತ್ಯವನ್ನು ಪರಿಶೀಲಿಸುವಂತೆ ಆಗ್ರಹಿಸಿದರು. ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿಸಲು ಶಕ್ತರಾಗಿರುವ ಜನರು ಸಬ್ಸಿಡಿ ತೆಗೆದುಕೊಳ್ಳಬಾರದು. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೆಲಸ ಮಾಡುತ್ತಿದೆ. ಹೆಚ್ಚುವರಿಯಾಗಿ, ರೈತರು, ಕಾರ್ಮಿಕರು, ತೋಟಗಾರರು, ಮಹಿಳೆಯರು ಮತ್ತು ಸಣ್ಣ ಅಂಗಡಿಕಾರರು ಸೇರಿದಂತೆ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.