ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ರಾಜಕೀಯ ಬಿಕ್ಕಟ್ಟು ಶಮನಗೊಂಡಿದೆ ಎಂದು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ (DK Shivakumar) ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದೆ ಪ್ರತಿಭಾ ಸಿಂಗ್ ಅವರು ಬಿಜೆಪಿ ಪರ ಹೇಳಿಕೆಯೊಂದನ್ನು ನೀಡಿದ್ದಾರೆ.
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಮಾಚಲಪ್ರದೇಶದಲ್ಲಿ ನಮಗಿಂತ ಬಿಜೆಪಿ (BJP) ಉತ್ತಮ ಕೆಲಸಗಳನ್ನು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಿರ್ದೇಶನದಂತೆ ಬಿಜೆಪಿಯು ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಬಹಳಷ್ಟು ಕೆಲಸಗಳು ಬಾಕಿ ಉಳಿದಿವೆ. ಬಿಜೆಪಿಯ ಕೆಲಸ ನಮಗಿಂತ ಉತ್ತಮವಾಗಿದೆ ಎಂಬುದು ನಿಜ ಎಂದು ಹೇಳಿದರು.
Advertisement
Advertisement
ಸಂಘಟನೆಯನ್ನು ಬಲಪಡಿಸಿದರೆ ಮಾತ್ರ ಮುಂಬರುವ ಚುನಾವಣೆಯನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ನಾನು ಮೊದಲ ದಿನದಿಂದಲೇ ಸಿಎಂಗೆ ಹೇಳುತ್ತಾ ಬಂದಿದ್ದೇನೆ. ಇದು ನಮಗೆ ತುಂಬಾ ಕಠಿಣ ಪರಿಸ್ಥಿತಿಯಾಗಿದೆ. ನಾವು ಪಕ್ಷವನ್ನು ಸಂಘಟಿಸಬೇಕಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕಾಗಿದೆ ಎಂದರು. ಇದನ್ನೂ ಓದಿ: ಹಾಲಿ 100 ಬಿಜೆಪಿ ಸಂಸದರಿಗೆ ಸಿಗಲ್ಲ ಟಿಕೆಟ್
Advertisement
ರಾಜ್ಯಸಭಾ ಚುನಾವಣೆಯಲ್ಲಿ ಹಿಮಾಚಲಪ್ರದೇಶದಲ್ಲಿ ಅಡ್ಡಮತದಾನ ನಡೆದಿತ್ತು. 6 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಮತದಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಆರು ಶಾಸಕರನ್ನು ಸದನದಿಂದ ಅನರ್ಹಗೊಳಿಸಲಾಗಿತ್ತು. ಅವರ ಭವಿಷ್ಯವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿಂಗ್ ಹೇಳಿದರು.