ಬೆಂಗಳೂರು: ನಾವು ಹಿಜಬ್ ಬಗ್ಗೆ ಕೇಳಿದ್ದಕ್ಕೆ ಈ ಧರ್ಮದಂಗಲ್ ಶುರುವಾಯ್ತು ಎಂದು ಆರೋಪಿಸುತ್ತಿದ್ದಾರೆ. ಆದರೆ ಧರ್ಮದಂಗಲ್‍ಗೆ ಕಾರಣ ನಾವಲ್ಲ ಎಂದು ಹಿಜಬ್ ವಿದ್ಯಾರ್ಥಿನಿಯರಾದ ಅಲಿಯಾ, ಅಲ್ಮಾಸ್ ಕಿಡಿಕಾರಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡ್ತಿದ್ದಾರೆ. ಧರ್ಮದಂಗಲ್ ಮೂಲಕ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿದ್ದಾರೆ. ಒಂದು ಧರ್ಮವನ್ನು ದೂಷಿಸಿ, ಟಾರ್ಗೆಟ್ ಮಾಡಲು ಇಷ್ಟೆಲ್ಲಾ ಮಾಡ್ತಿದ್ದಾರೆ. ನಾವು ಹಿಜಬ್ ಬಿಟ್ಟು ಬೇರೆ ಧರ್ಮದಂಗಲ್ ಬಗ್ಗೆ ಕಾಮೆಂಟ್ ಮಾಡಿಲ್ಲ. ನಾವು ಆಝಾನ್ ಕೂಗಿ, ಕೂಗಬೇಡಿ ಎಂದಿಲ್ಲ. ವ್ಯಾಪಾರ ಮಾಡಿ, ಮಾಡಬೇಡಿ ಅಂದಿಲ್ಲ. ನಮ್ಮದು ಹಿಜಬ್ ಪರ ಹೋರಾಟವಷ್ಟೆ ಎಂದು ಸ್ಪಷ್ಟಪಡಿಸಿದರು.
ನಾವು ನಮ್ಮ ಹಿಜಬ್ ಹಕ್ಕನ್ನು ಕೇಳಿದ್ದೇ ತಪ್ಪು ಅನ್ನೋ ರೀತಿ ನಮ್ಮನ್ನ ದೂಷಿಸುತ್ತಿದ್ದಾರೆ. ಆದರೆ ಹಿಜಬ್‍ನಿಂದ ನಮ್ಮ ಮುಖ, ಕೂದಲಷ್ಟೇ ಮುಚ್ಚೋದು, ನಮ್ಮ ಮಿದುಳನ್ನಲ್ಲ. ಹಿಜಬ್ ಹಾಕಿದಾಗ ನಮ್ಮ ಕೂದಲು, ಮುಖ ಅಷ್ಟೇ ಕವರ್ ಆಗುತ್ತದೆ. ಶಿಕ್ಷಿತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ವಿದ್ಯಾರ್ಥಿಗಳು, ನಮ್ಮನ್ನು ಈ ರೀತಿ ನೋಯಿಸಬೇಡಿ ಎಂದು ಮನವಿ ಮಾಡಿಕೊಂಡರು.
ಹಿಜಬ್ ಕೇಳಿದ್ದಕ್ಕೆ ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಆದರೆ ನಾವು ಕೇವಲ ನಮ್ಮ ಹಿಜಬ್ ಹಕ್ಕನ್ನಷ್ಟೇ ಕೇಳಿದ್ದು. ಸಂವಿಧಾನ ನಮಗೆ ಹೋರಾಡುವ ಹಕ್ಕುಗಳನ್ನು ನೀಡಿದೆ. ಅದರ ಪ್ರಕಾರವಾಗಿ ಹಿಜಬ್ ನಮ್ಮ ಹಕ್ಕು, ನಮ್ಮ ಹಕ್ಕನ್ನ ನಮಗೆ ಕೊಡಿ ಎಂದು ಹೇಳಿದರು. ಇದನ್ನೂ ಓದಿ: ಉಪನ್ಯಾಸಕಿಯರ ಜೊತೆ ಅಸಭ್ಯ ವರ್ತನೆ – ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿತ
ಹಿಜಬ್ ವಿವಾದವನ್ನು ನಮ್ಮ ಕಾಲೇಜಿನಲ್ಲೇ ಇತ್ಯರ್ಥ ಮಾಡಬಹುದಿತ್ತು. ಆದರೆ ಹಿಜಬ್ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಮಾಡಿದ್ದಾರೆ. ಈ ಮೂಲಕ ನಮ್ಮ ಹೆಗಲ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡಿದ್ದಾರೆ. ಹಿಜಬ್ ಹಾಗೂ ಶಿಕ್ಷಣ ನಮಗೆ ಮುಖ್ಯವಾಗಿದೆ. ಆದರೆ ನಮ್ಮನ್ನು ಟೆರರಿಸ್ಟ್‌ಗಳ ರೀತಿ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ವಲ್ಲಭಭಾಯಿ ಪಟೇಲ್ ಆರ್‌ಎಸ್‌ಎಸ್ ನಿಷೇಧಿಸಿದ್ದರು: ಅಶೋಕ್ ಗೆಹ್ಲೋಟ್