ಹಾವೇರಿ: ರಾಜ್ಯಾದ್ಯಂತ ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಿವೆ. ಪರೀಕ್ಷಾ ಕೇಂದ್ರಕ್ಕೆ ಹಿಜಬ್ ಧರಿಸಿಕೊಂಡು ಬಂದು, ಹೊರಗೆ ಹಿಜಬ್ ತೆಗೆದು ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿನಿಯರು ಹೋಗುತ್ತಿದ್ದಾರೆ.
Advertisement
ಹಾವೇರಿ ಜಿಲ್ಲೆಯಲ್ಲಿ 100 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 428 ಶಾಲೆಗಳ ಒಟ್ಟು 24,871 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಪರೀಕ್ಷಾ ಹಾಗೂ ಹೊಸಮಠ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಹಿಜಬ್ ತೆಗೆದು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರಕ್ಕೆ ಹೋದರು. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ – ಸಮವಸ್ತ್ರ ಧರಿಸಿದ್ರೆ ಮಾತ್ರ ಪ್ರವೇಶಕ್ಕೆ ಅನುಮತಿ
Advertisement
Advertisement
ಪರೀಕ್ಷಾ ಕೇಂದ್ರದ ಬಳಿ ಪೊಲೀಸ್ ಬಿಗಿಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿಯುತವಾಗಿ ಕನ್ನಡ ಪರೀಕ್ಷೆ ಪ್ರಾರಂಭಗೊಂಡಿವೆ. ಪರೀಕ್ಷಾ ಕೇಂದ್ರಕ್ಕೆ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಶುಭಹಾರೈಸಿ ಪರೀಕ್ಷೆ ಕಳಿಸಿದರು. ಇದನ್ನೂ ಓದಿ: ಹಿಂದುತ್ವದ ವಿರೋಧಿ ಆಗ್ಬೇಡಿ: ಕೇಜ್ರಿವಾಲ್‍ಗೆ ಅಸ್ಸಾಂ ಸಿಎಂ ತಿರುಗೇಟು