ಉಡುಪಿ: ನನಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು ಎಂದು ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿರುವ ವಿಚಾರವಾಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಂದುತ್ವದ ವಿಚಾರದಲ್ಲಿ ಕೆಲಸ ಮಾಡುವಾಗ ಬೆದರಿಕೆಗಳು ಸಾಮಾನ್ಯ. ಧಮ್ಕಿ ಕೊಟ್ಟವನಿಗೆ ನನ್ನ ವ್ಯಾಲ್ಯೂಯೇಷನ್ ಎಷ್ಟು ಅಂತ ಗೊತ್ತಿಲ್ಲ. ಒಬ್ಬ ಮನುಷ್ಯನ ಬೆಲೆ ಎಷ್ಟು ಅಂತ ಗೊತ್ತಿದ್ದರೆ ಆತ ಬೆಲೆ ಕಟ್ಟುತ್ತಿರಲಿಲ್ಲ. ಧಮ್ಕಿ ಬಂತು ಅಂತ ನನ್ನ ಕೆಲಸದ ಶೈಲಿ ರಾಷ್ಟ್ರೀಯತೆ ಹಿಂದುತ್ವದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಲಕಿಯರಿಗೆ ರೈಫಲ್ ತರಬೇತಿ, ಸೂಸೈಡ್ ಬಾಂಬ್ ತರಬೇತಿ ನೀಡಿದ್ದೆ – ಐಸಿಸ್ ಸೇರಿದ್ದ ಶಿಕ್ಷಕಿಯಿಂದ ತಪ್ಪೊಪ್ಪಿಗೆ
Advertisement
Advertisement
ಕಿಡಿಗೇಡಿಗಳು ಅವರ ತಲೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ತಲೆಗೆ 10 ಲಕ್ಷ ರೂಪಾಯಿ ಘೋಷಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು. ತಾಕತ್ ಇದ್ದರೆ ಅವರು ಎದುರು ಬಂದು ಮಾತಾಡಲಿ. ನನ್ನ ಜೀವನದಲ್ಲಿ ಇಂತದ್ದು ತುಂಬಾ ನೋಡಿದ್ದೇನೆ. ನಾನು ದೇಶದ್ರೋಹಿ ಚಟುವಟಿಕೆ ಮಾಡಿಲ್ಲ, ಅನ್ಯಾಯ ಮಾಡಿಲ್ಲ. ನನಗೆ ದೋ ನಂಬರ್ ಬ್ಯುಸಿನೆಸ್ ಇಲ್ಲ ನಾನು ಯಾರದೋ ಅನ್ನದ ಬಟ್ಟಲಿಗೆ ಕೈಹಾಕಿ ತಿಂದಿಲ್ಲ ಎಂದು ಸಿಡಿದರು. ಇದನ್ನೂ ಓದಿ: ಮೈಕ್ ದಂಗಲ್ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ
Advertisement
Advertisement
ಶಾಲೆಯ ಶಿಸ್ತು ಮತ್ತು ಕೋರ್ಟ್ ಆದೇಶ ಪಾಲಿಸಲು ನಾವು ಹಿಜಬ್‍ನ ವಿರುದ್ಧವೇ ನಿಲ್ಲುತ್ತೇವೆ. ಈ ವರ್ಷ ಕೂಡ 40ಕ್ಕೂ ಹೆಚ್ಚು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ನಾವು ಅಡ್ಮಿಶನ್ ಮಾಡಿಸಿಕೊಂಡಿದ್ದೇವೆ. ನಾವು ಹಿಜಬ್ ತೆಗೆದು ಕ್ಲಾಸಿಗೆ ಬರುತ್ತೇವೆ ಎಂದು ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಿಡಿಗೇಡಿಗಳು ಪ್ರಮೋದ್ ಮುತಾಲಿಕ್ ಅವರಿಗೂ ಬೆದರಿಕೆ ಹಾಕಿದ್ದಾರೆ. ನಾನು ಅವರ ಜೊತೆ ಮಾತನಾಡಿಲ್ಲ, ಮಾತನಾಡುತ್ತೇನೆ. ನನ್ನ ಸಿದ್ಧಾಂತ ದೇಶದ ವಿಚಾರದ ಹೋರಾಟ ಮಾಡುತ್ತೇನೆ. ನಾನು ಭಯಪಡುವ ಪ್ರಶ್ನೆಯೇ ಇಲ್ಲ. ಟೀಕೆ ಬೆದರಿಕೆ ಸಾಮಾಜಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗ ಎಂದರು.