ಬೆಂಗಳೂರು: ಹಿಜಬ್ ವಿವಾದಕ್ಕೆ ಸಿಎಫ್‍ಐ ಸಂಘಟನೆಯೇ ಕಾರಣ ಅಂತ ಕಾಲೇಜ್ ಶಿಕ್ಷಕರ ಪರ ವಾದ ಮಾಡುತ್ತಿರುವ ವಕೀಲ ನಾಗಾನಂದ್ ವಾದಿಸಿದ್ದಾರೆ.
Advertisement
ಹೈಕೋರ್ಟ್‍ನಲ್ಲಿ 9ನೇ ದಿನದ ಹಿಜಬ್ ವಿವಾದ ವಿಚಾರಣೆ ನಡೆಯಿತು. ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಜ್ ತೆಗೆಯೋದಿಲ್ಲ ಅನ್ನೋ ವಿದ್ಯಾರ್ಥಿನಿಯರ ಹೇಳಿಕೆಯೇ ಸುಳ್ಳು. ಆಧಾರ್ ಕಾರ್ಡ್‍ನಲ್ಲಿ ಅವರು ಹಿಜಬ್ ಹಾಕಿಲ್ಲ ಅಂತ ವಕೀಲರು ತೋರಿಸಿದರು. 2014ರಿಂದ ಸಮವಸ್ತ್ರ ಹಾಕಿಕೊಂಡು ಬರುತ್ತಿದ್ದಾರೆ. 2021ರ ಡಿ.30 ರಂದು ಸಿಎಫ್‍ಐನವರು ಹಿಜಬ್‍ಗೆ ಅವಕಾಶ ಕೊಡಿ ಅಂತ ಆಡಳಿತ ಮಂಡಳಿಗೆ ಕೇಳಿಕೊಂಡರು. ಇದನ್ನು ಆಡಳಿತ ಮಂಡಳಿ ತಿರಸ್ಕರಿಸಿತು. ಅಂದಿನಿಂದ ವಿದ್ಯಾರ್ಥಿನಿಯರು ಕಟುವಾಗಿ ನಡೆದುಕೊಳ್ಳುತ್ತಿದ್ದಾರೆ. ಸಿಎಫ್‍ಐ ವಿದ್ಯಾರ್ಥಿ ಸಂಘಟನೆ ಆದರೂ ಅಧಿಕೃತ ಮಾನ್ಯತೆ ಪಡೆದಿಲ್ಲ. ಬರೀ ಗದ್ದಲವನ್ನೇ ಸೃಷ್ಟಿಸ್ತಿದೆ ಎಂದು ನಾಗಾನಂದ್ ವಾದಿಸಿದರು. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು
Advertisement
Advertisement
ಇದ್ದಕ್ಕಿದ್ದಂತೇ ಇದು ಹೇಗೆ ಸೃಷ್ಟಿಯಾಯಿತು ಅಂತ ಅಚ್ಚರಿ ಸೂಚಿಸಿದ ಸಿಜೆ ಅವಸ್ತಿ, ಸಿಎಫ್‍ಐ ಬಗ್ಗೆ ಮಾಹಿತಿ ಕೊಡುವಂತೆ ಎಜಿಗೆ ಸೂಚಿಸಿದರು. ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಕೊಡೋದಾಗಿ ಎಜಿ ನಾವದಗಿ ತಿಳಿಸಿದರು. ಇದಕ್ಕೆ ಅರ್ಜಿದಾರರ ವಕೀಲ ತಾಹೀರ್ ಮಧ್ಯಪ್ರವೇಶಿಸಿ, ಘಟನೆಗೆ ಕೇಸರಿ ಶಾಲು ಹಂಚಿದ ವರದಿಗಳೂ ಇವೆ. ಅದರ ಬಗ್ಗೆಯೂ ಕೇಳಬೇಕು ಅಂದ್ರು. ಪರಿಶೀಲಿಸುವುದಾಗಿ ಸಿಜೆ ಹೇಳಿದರು. ಇದನ್ನೂ ಓದಿ: ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ
Advertisement
ಕಾಲೇಜು ಆಡಳಿತ ಪರವಾಗಿ ಸಜ್ಜನ್ ಪೂವಯ್ಯ ವಾದ ಮಂಡಿಸಿ, 2014ರಲ್ಲಿ ಸಿಡಿಸಿಗೆ ಅಧಿಕಾರ ನೀಡಲಾಗಿದೆ. 5 ಮಕ್ಕಳಿಗೆ ಮಾತ್ರ ಸಮಸ್ಯೆ ಆಗಿದೆ. ಉಡುಪಿ ಜಿಲ್ಲೆಯಲ್ಲಿ 12 ಸರ್ಕಾರಿ ಶಾಲೆಗಳಿದ್ದು ಅಲ್ಲಿ ಹಿಜಬ್‍ಗೆ ಅವಕಾಶ ನೀಡಲಾಗಿದೆ. ಈ ನಿರ್ಧಾರವನ್ನು ಆಯಾ ಶಾಲಾ ಆಡಳಿತ ಮಂಡಳಿಗಳೇ ನಿರ್ಧಾರ ಮಾಡಿವೆ ಎಂದರು. ವಾದ ಆಲಿಸಿದ ಹೈಕೋರ್ಟ್ ಪೂರ್ಣ ಪೀಠ ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು. ಅಲ್ಲದೆ, ಹಿಜಬ್ ಕುರಿತ ಅಂತಿಮ ಆದೇಶದವರೆಗೆ `ಎಲ್ಲೆಲ್ಲಿ ಸಮವಸ್ತ್ರ ಪಾಲನೆ ಕಡ್ಡಾಯ ಇದೆಯೋ ಅಲ್ಲಿ ಸಮವಸ್ತ್ರ’ವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕಡ್ಡಾಯವಿಲ್ಲದ ಕಡೆ ಯಾವುದೇ ತೊಂದರೆ ಇಲ್ಲ ಅಂತ ಸಿಜೆ ರಿತುರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠ ಮತ್ತೊಮ್ಮೆ ಸ್ಪಷ್ಟಪಡಿಸಿತು.