ಚೆನ್ನೈ: ಮಂಡ್ಯ ಕಾಲೇಜು ಹುಡುಗರ ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ಪಿಇಎಸ್ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್‍ಗೆ ತಮಿಳುನಾಡು ಮೂಲದ ಮುಸ್ಲಿಂ ಸಂಘಟನೆಯೊಂದು ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ.
ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದ ಹಿಂದು ಹುಡುಗರ ತಂಡಕ್ಕೆ ಪ್ರತಿಕ್ರಿಯೆಯಾಗಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಭಾರೀ ಸುದ್ದಿಯಾಗಿದ್ದರು. ಇದೀಗ ಮುಸ್ಕಾನ್ ಧೈರ್ಯಕ್ಕೆ ಮೆಚ್ಚಿ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ(ಟಿಎಂಎಂಕೆ) ಫಾತಿಮಾ ಶೇಖ್ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ಚೆಕ್ ನೀಡಿದ ಇಮ್ರಾನ್ ಪಾಷಾ
Advertisement
Advertisement
ಭಾರತೀಯ ಪ್ರಜೆಯಾಗಿ ತನಗೆ ನೀಡಿದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸಿದ ಕೇಸರಿ ದಳದ ಮುಂದೆ ನಿರ್ಭೀತಿಯಿಂದ ನಿಂತು ತನ್ನ ಹಕ್ಕನ್ನು ಪ್ರತಿಪಾದಿಸಿದ ಮುಸ್ಕಾನ್ ಅವರಿಗೆ ಫಾತಿಮಾ ಶೇಖ್ ಪ್ರಶಸ್ತಿಯನ್ನು ನೀಡಲು ಹೆಮ್ಮೆಪಡುತ್ತದೆ ಎಂದು ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ ಹೇಳಿದೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್
Advertisement
ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಖ್ಯಾತಿಗಳಿಸಿದ್ದ ಫಾತಿಮಾ ಶೇಖ್‍ರ ಹೆಸರಿನ ಪ್ರಶಸ್ತಿಯನ್ನು ಮುಸ್ಕಾನ್‍ಗೆ ನೀಡಲಾಗುವುದು ಎಂದು ಟಿಎಂಎಂಕೆ ತಿಳಿಸಿದೆ.