ತುಮಕೂರು: ಮೂಲ ಕಾಂಗ್ರೆಸ್ಸಿಗರು ಯಾರೂ ಸ್ವಾಮೀಜಿಗಳ ಶಿರವಸ್ತ್ರದ ವಿರುದ್ಧದ ಹೇಳಿಕೆ ನೀಡಲ್ಲ. ಸಿದ್ದರಾಮಯ್ಯ ಅವರು ಕನ್ವರ್ಟ್ ಕಾಂಗ್ರೆಸ್‍ನವರು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ವರ್ಟ್ ಆದವರು ಯಾವತ್ತೂ ಕಠಿಣವಾಗಿ ಪ್ರಾಕ್ಟಿಸ್ ಮಾಡುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಹೋದಾಗಿಂದ ಈ ರೀತಿಯ ವಿವಾದದ ಪ್ರಾಕ್ಟಿಸ್ ಮಾಡ್ತಾ ಇದ್ದಾರೆ. ಮೂಲ ಕಾಂಗ್ರೆಸ್ಸಿಗರು ಈ ರೀತಿ ಮಾತನಾಡುತ್ತಿಲ್ಲ. ಹೊಸದಾಗಿ ಕನ್ವರ್ಟ್ ಆದವರು ತುಂಬಾ ಸಲ ಚರ್ಚ್‍ಗೆ ಹೋಗುತ್ತಾರೆ. ಹಾಗೆ ಸಿದ್ದರಾಮಯ್ಯ ಕಠಿಣ ಪ್ರಾಕ್ಟಿಸ್ ಮಾಡೋಕೆ ಹೋಗಿ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಹಿಜಬ್ ವಿಚಾರದಲ್ಲಿ ಸ್ವಾಮಿಗಳನ್ನು ಎಳೆದು ತಂದಿರೋದು ದುಃಖ ತಂದಿದೆ. ಸರ್ವಸ್ವವನ್ನೂ ತ್ಯಾಗ ಮಾಡಿ, ಈ ದೇಶದ ಸಂಸ್ಕೃತಿ ರಕ್ಷಣೆ ಮಾಡೋರು ಸ್ವಾಮೀಜಿಗಳು. ಸಮಾಜದ ಒಳಿತಿಗೋಸ್ಕರ ತಮ್ಮ ಜೀವನ ಸವೆದವರನ್ನ ಹಿಜಬ್ ವಿವಾವದಲ್ಲಿ ಎಳೆದು ತಂದಿರೋದು ತುಂಬಾ ದುಃಖ ಆಗುತ್ತದೆ ಬೇಸರ ವ್ಯಕ್ತಪಡಿಸಿದರು.
Advertisement
ಹಿಜಬ್ ವಿಚಾರವಾಗಿ ಮಾತನಾಡಿ, ಮುಲ್ಲಾಗಳು ಸಿದ್ದರಾಮಯ್ಯರ ಬಳಿ ಬಂದಿದರಂತೆ. ಆಗ ಸಿದ್ದರಾಮಯ್ಯ ಅವರು ಸುಪ್ರಿಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿವರೆಗೂ ಸುಮ್ಮನೀರಿ ಎಂದು ಅವರಿಗೆ ತಿಳಿ ಹೇಳಬಹುದಿತ್ತು. ಆದರೆ ಕಾಂಗ್ರೆಸ್ ಉದ್ದಕ್ಕೂ ಸಮಾಜ ಒಡೆಯುವ ಕೆಲಸ ಮಾಡಿಕೊಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಕಾಶ್ಮೀರದಲ್ಲಿ 370 ಆಕ್ಟ್ ತಂದರು. ಕಾಂಗ್ರೆಸ್‍ನ ಅಧಿವೇಶನದಲ್ಲಿ ವಂದೇ ಮಾತರಂ ಹಾಡು ಹಾಡೋದನ್ನು ನಿಲ್ಲಿಸಿದರು. ಶಿಕ್ಷಣದ ಪಠ್ಯ ಪುಸ್ತಕದಲ್ಲಿ ಭಾರತದ ನಿಜವಾದ ಇತಿಹಾಸ ಮುಚ್ಚಿಟ್ಟಿದೆ. ಇದೆಲ್ಲವೂ ಕೂಡ ಮುಸಲ್ಮಾನರ ತುಷ್ಟೀಕರಣಕ್ಕಾಗಿ ಮಾಡಿಕೊಂಡು ಬಂದಿದ್ದಾರೆ. ವಿಧಾನಸಭೆಯಲ್ಲಿ ನಾನು ಮನವಿ ಮಾಡಿಕೊಂಡಿದ್ದೆ. ನಾವೆಲ್ಲ ಆ ಮಕ್ಕಳಿಗೆ ತುಂಬಾ ಸಲ ಬುದ್ಧೀ ಮಾತು ಹೇಳಿದ್ವಿ ಸಿದ್ದರಾಮಯ್ಯನವರೇ. ನಮ್ಮ ಮಾತು ಕೇಳಿಲ್ಲ, ನಿಮ್ಮ ಮಾತು ಕೇಳಬಹುದು. ಆ 6 ಹುಡುಗಿಯರಿಗೆ ಮನದಟ್ಟು ಮಾಡಿ. ದೇಶದ ಪ್ರಜೆಗಳು ಕೋರ್ಟ್‍ನ ತೀರ್ಪಿನ ವಿರುದ್ಧ ಹೋಗುವುದು ಒಳ್ಳೆಯದಲ್ಲ ಎಂದು ಹುಡುಗಿಯರಿಗೆ ಸಿದ್ದರಾಮಯ್ಯ ಅವರು ತಿಳಿಹೇಳಬೇಕಿತ್ತು. ಆದರೆ ಅವರು ಅದನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೋಗಿಮಟ್ಟಿ ಗಿರಿಧಾಮಕ್ಕೆ ಕಿಡಿಗೇಡಿಗಳಿಂದ ಬೆಂಕಿ – ಅಪಾರ ಸಸ್ಯಕಾಶಿ ಸುಟ್ಟು ಭಸ್ಮ
ಕೋರ್ಟ್ ತೀರ್ಪಿನ ವಿರುದ್ಧ ಹೋಗಬಾರದು ಎಂದು ಸಿದ್ದರಾಮಯ್ಯ ಅವರು ಬೇಕಾದಷ್ಟು ಬಾರಿ ಹೇಳಿದ್ದಾರೆ. ಅಂಥವರೇ ಯಾಕೆ ಹೀಗೆ ಆಡ್ತಾರೋ ಗೊತ್ತಿಲ್ಲ. ನನ್ನ ಪ್ರಕಾರ ಸಿದ್ದರಾಮಯ್ಯ ಅವರು ಸ್ವಂತ ಬುದ್ಧಿಯಿಂದ ಈ ರೀತಿ ಮಾತಾಡ್ತಾ ಇಲ್ಲ. ಕಾಂಗ್ರೆಸ್‍ನ ಒಳಗಿರುವವರ ಒತ್ತಡ ಅವರ ಮೇಲಿದೆ. ಸದನದಲ್ಲಿ ಅವರು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವಾಗ ಹಿಜಬ್ ಬಗ್ಗೆ ಮಾತನಾಡಿಲ್ಲ. ಬಳಿಕ ಜಮೀರ್ ಅಹಮದ್ ಮತ್ತು ಖಾದರ್ ಬಂದು ಸಿದ್ದರಾಮಯ್ಯ ಜೊತೆ ಏನೋ ಮಾತನಾಡಿದರು. ಆದಾದ ಬಳಿಕ ಸಿದ್ದರಾಮಯ್ಯ ಹಿಜಬ್ ಬಗ್ಗೆ ಮಾತನಾಡಿದರು ಎಂದರು. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ