ಲಕ್ನೋ: ಕರ್ನಾಟಕದಲ್ಲಿ ಪ್ರಾರಂಭವಾದ ಹಿಜಬ್ ಗಲಬೆ ಮುಂದುವರಿದು ಇದೀಗ ಆಗ್ರಾದ ತಾಜ್ ಮಹಲ್ ಆವರಣಕ್ಕೂ ಪ್ರವೇಶಿಸಿದೆ. ಹಿಂದೂ ಪ್ರತಿಭಟನಕಾರರು ತಾಜ್ ಮಹಲ್ ಆವರಣದಲ್ಲಿ ಹನುಮಾನ್ ಚಾಲೀಸಾ ಪಠಿಸಲು ಪ್ರಯತ್ನಿಸಿದ್ದು, ಅವರನ್ನು ಪೊಲೀಸರು ತಡೆದಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಜನರು ತಮ್ಮ ನಂಬಿಕೆಗೆ ಅನುಗುಣವಾಗಿ ಉಡುಪುಗಳನ್ನು ಧರಿಸುವುದು ನಿರ್ಬಂಧಿಸಬೇಕು. ಹಿಜಬ್ ಹೆಸರಿನಲ್ಲಿ ಗಲಾಟೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದೇಶಾದ್ಯಂತ ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಪ್ರತಿಭಟನಕಾರರು ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಹಿಜಬ್-ಕೇಸರಿ ವಿವಾದ – ಉಡುಪಿ, ಶಿವಮೊಗ್ಗದ ಕೆಲ ಕಾಲೇಜ್‍ಗಳಿಗೆ ರಜೆ ಘೋಷಣೆ
Advertisement
Advertisement
ಬಲಪಂಥೀಯ ಪ್ರತಿಭಟನಕಾರರು ಹನುಮಾನ್ ಚಾಲೀಸ ಪಠಿಸಲು ತಾಜ್‌ಮಹಲ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಅವರನ್ನು ಶಿಲ್ಪಗ್ರಾಮ್ ಪಾರ್ಕಿಂಗ್‌ನಲ್ಲಿ ತಡೆದಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ಯಾನ್ ಕಾರ್ಡ್ ಕಳೆದುಕೊಂಡ ಪೀಟರ್ಸನ್‌ಗೆ ಸಹಾಯ ಮಾಡಿದ ಭಾರತೀಯ ತೆರಿಗೆ ಇಲಾಖೆ
Advertisement
ತಾಜ್ ಮಹಲ್ ಅನ್ನು ತೇಜೋ ಮಹಲೇ(ಶಿವ ಮಂದಿರ) ಎಂದು ಪರಿಗಣಿಸಿ, ಕೇಸರಿ ಬಟ್ಟೆ ಧರಿಸಿ, ಹನುಮಾನ್ ಚಾಲೀಸಾ ಪಠಣ ಮಾಡಲು ನಾವು ನಿರ್ಧರಿಸಿದ್ದೆವು. ಆದರೆ ಪೊಲೀಸರು ನಮ್ಮನ್ನು ತಡೆದಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ನ ಬಜ್ರ್ ವಲಯದ ಉಪಾಧ್ಯಕ್ಷ ಆಶೀಶ್ ಆರ್ಯ ಹೇಳಿದ್ದಾರೆ.