ಬೆಂಗಳೂರು: ಹಿಜಬ್ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಸ್ವಾಮೀಜಿಗಳು, ಮೌಲ್ವಿಗಳು, ಪಾದ್ರಿಗಳ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು.
Advertisement
ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಮುರುಘ ರಾಜೇಂದ್ರ ಮಠದ ಶಿವಮೂರ್ತಿ ಶರಣರು, ಮುಸ್ಲಿಂ ಧರ್ಮಗುರು ಮೌಲಾನ್ ಮಕ್ಸೂದ್ ಸಾಹೇಬ್ ಸೇರಿದಂತೆ 10 ಕ್ಕೂ ಹೆಚ್ಚು ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಡಾ ಶಿವಮೂರ್ತಿ ಮುರುಘಾ ಶರಣರು, ಅನೇಕ ಸಂದರ್ಭಗಳಲ್ಲಿ ಹಲವು ಸಮಸ್ಯೆಗಳನ್ನು ಕಂಡಿದ್ದೇವೆ. ಕೊರೊನಾ ಬಂದಾಗಲೂ ಆಹಾರ, ಔಷಧ ಕಿಟ್ ವಿತರಣೆ ಮಾಡಿದ್ದೇವೆ. ನೈಸರ್ಗಿಕ ಸಮಸ್ಯೆ ಬಂದಾಗಲೂ ಸಮಸ್ಯೆಗೆ ಸ್ಪಂದಿಸಿದ್ದೇವೆ. ಸಮಾಜದಲ್ಲಿ ಉದ್ಬವವಾಗಿರುವ ಸಂದ್ಗಿತ ಸಮಸ್ಯೆ ಎದುರಾಗಿದೆ. ಇದು ಮಾನವ ನಿರ್ಮಿತ ಸಂದರ್ಭ ಇದಾಗಿದೆ. ಎಲ್ಲ ಧರ್ಮದಲ್ಲೂ ಧಾರ್ಮಿಕ ಮುಖಂಡರಿದ್ದಾರೆ. ನಾವು ಸಮಾಜಕ್ಕೆ ಶಾಂತಿ ರವಾನೆ ಸಾರಬೇಕಾಗಿದೆ. ಇವತ್ತು ಸಾಮಾಜಿಕ ಸಾಮರಸ್ಯ ಎಲ್ಲರಿಗೂ ಬೇಕಾಗಿದೆ. ಸಾಮಾಜಿಕ ಶಾಂತಿಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ. ಸಮವಸ್ತ್ರ, ವಸ್ತ್ರ ಸಂಹಿತೆ ಎಲ್ಲರ ನೆಮ್ಮದಿ ಕೆಡಿಸಿದೆ. ಈ ವಸ್ತ್ರಸಂಹಿತೆಯಲ್ಲಿ ಶಾಂತಿ ಬೇಕಾದಾಗ ಪರಿಹಾರ ಕಂಡುಕೊಳ್ಳಬೇಕಾಗಿದೆ. ನಾವೆಲ್ಲ ಶಾಂತಿ, ಸಾಮರಸ್ಯದ ಪರವಾಗಿದ್ದೇವೆ. ಈಗ ಎದ್ದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸದ್ಯ ಕೋರ್ಟ್‍ನಲ್ಲಿ ಕೇಸ್ ನಡೆಯುತ್ತಿದೆ. ಕೋರ್ಟ್ ಹೇಳಿದಂತೆ ನಾವೆಲ್ಲ ಕೇಳಬೇಕಾಗಿದೆ. ಅದಕ್ಕೂ ಮುನ್ನ ಶಾಂತಿ ನೆಮ್ಮದಿ ಬೇಕಾದರೆ ಸದ್ಯಕ್ಕೆ ಸಾಮರಸ್ಯ ಕಾಯಬೇಕಾಗಿದೆ. ನಾವೆಲ್ಲ ಶಾಂತಿ ಮಂತ್ರ ಜಪಿಸಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಕನಸು ಹೊಂದಿದ್ದರು ರಾಜೇಶ್: ಕೆ.ಗೋಪಾಲಯ್ಯ ಕಂಬನಿ
Advertisement
Advertisement
ಸದ್ಯ ಕೋರ್ಟ್ ಯಾವುದೇ ತೀರ್ಪು ಕೊಟ್ಟರೂ ಅದನ್ನು ಪಾಲಿಸಬೇಕಾಗುತ್ತದೆ. ಅಡುಗೆ, ಮನಸ್ಸು ಎಲ್ಲವೂ ಕೆಟ್ಟರು ಕ್ಷಣಿಕ ಮಾತ್ರ. ಅದೇ ನಿಮಗೆ ಶಿಕ್ಷಣ ಕೆಟ್ಟರೆ ವಾತವಾರಣವೇ ಹದಗೆಡಲಿದೆ. ಕೇಸರಿ ಹಾಕಿಕೊಂಡು ಬರುವವರ ಸಂಖ್ಯೆ ಇಳಿಕೆಯಾಗಿದೆ. ಸದ್ಯ ಕೇಸ್ ಕೋರ್ಟ್ ಬಳಿ ಇದೆ. ಇದರ ತೀರ್ಪಿನಂತೆ ಎಲ್ಲರೂ ನಡೆಯಬೇಕಾಗಿದೆ. ಎಲ್ಲರೂ ಸೇರಿ ಸಾಮರಸ್ಯ ಕಾಪಾಡಬೇಕಾಗಿದೆ. ವ್ಯವಸ್ಥೆ ಹೀಗೆ ಇರಲಿ ಎಂದು ನಾವು ಹೇಳಲು ಆಗಲ್ಲ. ಸರ್ಕಾರ, ಕೋರ್ಟ್ ವ್ಯವಸ್ಥೆ ಹೇಳಲಿ. ಹೀಗಿರುವಾಗ ನಾವು ಯಾರಿಗೂ ಹೀಗೆ ಇರಿ ಎಂದು ಹೇಳಲು ಆಗಲ್ಲ. ಕೋರ್ಟ್ ಆದೇಶದ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದೇವೆ.
Advertisement
ಆಲ್ ಇಂಡಿಯಾ ಮುಲ್ಲಿ ಕೌನ್ಸಿಲ್ ಮೌಲಾನ ಸುಲೇಮಾನ್ ಖಾನ್: ಈಗಾಗಲೇ ಶಾಂತಿಯೇ ಮುಖ್ಯ ಎಂಬ ವಿಚಾರ ತಲುಪಿಸಲಾಗಿದೆ. ಭಾರತ, ಕರ್ನಾಟಕ ವಿವಿಧತೆಯ ಏಕತೆಯನ್ನು ಸಾರುವ ದೇಶ ಎಂಬುದು ತಿಳಿದಿದೆ. ಒಂದೇ ಸತ್ಯವನ್ನು ನೂರಾರು ರೀತಿ ಎಲ್ಲವನ್ನು ವಿವರಿಸಲಾಗುತ್ತದೆ. ಶಾಂತಿಗಿಂತ ಯಾವುದು ದೊಡ್ಡದಲ್ಲ ನಿಮಗೆ ಗೊತ್ತಿರಲಿ. ವಿವಿಧತೆ, ಐಕ್ಯತೆ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಚಿತ್ರದುರ್ಗದ ಮುರುಘಾ ಮಠ ಎಲ್ಲ ಧರ್ಮದ ಪ್ರತೀಕವಾಗಿದೆ. ಧಾರ್ಮಿಕ ಆಚರಣೆಗಳನ್ನು ಒಬ್ಬರ ಮೇಲೆ ಒಬ್ಬರು ಅವಲಂಬಿಸುತ್ತೇವೆ. ಬೆಂಗಳೂರು ಕರಗ ಹಿಂದು – ಮುಸ್ಲಿಂ ಪ್ರತೀಕವಾಗಿದೆ. ಎಲ್ಲ ಧರ್ಮದವರು ಸೌರ್ಹಾದತೆಯಿಂದ ನಡೆದುಕೊಳ್ಳುತ್ತೇವೆ. ದರ್ಗಾಕ್ಕೆ ಹಿಂದೂಗಳು ಹೋಗಿ ಪ್ರದಕ್ಷಿಣೆ ಹಾಕುತ್ತಾರೆ. ಹಾಗೇ ಬೆಂಗಳೂರು ಕರಗ ಬಗ್ಗೆ ಮುಸ್ಮಿಮರು ಸಂಪ್ರದಾಯ ಆಚರಿಸುತ್ತಾರೆ. ರಾಜ್ಯದ ಜನರಿಗೆ ಒಂದೆ ಸಂದೇಶ ನೀಡುತ್ತೇನೆ. ಕೋರ್ಟ್ ತೀರ್ಪು ಬರುವವರೆಗೂ ಎಲ್ಲರೂ ಸೌಹರ್ದತೆಯಿಂದ ನಡೆದುಕೊಳ್ಳಬೇಕಾಗಿದೆ. ರಾಜಕೀಯ ವ್ಯಕ್ತಿಗಳು ಇದು ದೊಡ್ಡ ಸಮಸ್ಯೆಯಾಗಿ ಬೆಳೆಯದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇವೆ. ಹಿಜಬ್ ಸಂಬಂಧ ಅಂತಿಮವಾದ ತೀರ್ಪು ಬಂದಿಲ್ಲ. ಮಧ್ಯಂತರ ತೀರ್ಪು ಮಾತ್ರ ಬಂದಿದೆ. ಕೋರ್ಟ್ ಮಧ್ಯಂತರ ತೀರ್ಪು ಬಗ್ಗೆ ಸ್ಪಷ್ಟವಾಗಿ ತಿಳಿಯಿರಿ. ಪೋಷಕರು, ಶಿಕ್ಷಕರು, ಮಕ್ಕಳು, ಉಪನ್ಯಾಸಕರು ಸಿಬ್ಬಂದಿ ಅರ್ಥ ಮಾಡಿಕೊಳ್ಳಬೇಕಾಗಿದೆ. ತರಗತಿ ಒಳಗೆ ಮಾತ್ರ ಹಿಜಬ್ ಧರಿಸಬಾರದೆಂದು ಕೋರ್ಟ್ ಹೇಳಿದೆ. ಸರ್ಕಾರ ಒಂದು ಹೆಜ್ಜೆ ತೆಗೆದುಕೊಳ್ಳಬೇಕಾಗಿದೆ. ಕೊರೊನಾ ರೀತಿಯೇ ಆನ್ ಲೈನ್ ಕ್ಲಾಸ್ ನಡೆಸಿ. ಧಾರ್ಮಿಕ ಭಾವನೆ ಪಾಲನೆ ಮಾಡಲು ಎಲ್ಲರಿಗೂ ಅಧಿಕಾರ ಇದೆ. ಶಿಕ್ಷಣ ಮುಖ್ಯ ಹಾಗಂತ ಗಲಾಟೆ ಬೇಡ. ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಹಲವರು ತಡೆಯುತ್ತಿದ್ದಾರೆ. ಇದು ಭವಿಷ್ಯವನ್ನ ತಡೆದಂತೆ ಆಗಿದೆ. ವಿದ್ಯಾರ್ಥಿಗಳಿಗೆ ನಾನು ಯಾವುದೇ ಸಲಹೆ ಕೊಡಲ್ಲ. ಸರ್ಕಾರ ತಮ್ಮ ಆದೇಶ ವಾಪಸ್ ಪಡೆಯಿರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಎಂದು ಗುರುತಿಸಿಕೊಂಡಿದ್ದರು ನಟ ರಾಜೇಶ್
ಫಾದರ್ ಜಾನ್ ಆರ್ಚ್ ಬಿಷಪ್: ಸಮುದಾಯ, ಸಮಾಜವನ್ನು ನೋವು ಮಾಡದಂತೆ ಸದ್ಯ ನಿರ್ಧಾರ ಆಗಬೇಕಾಗಿದೆ. ದೇವಾಲಯ ಕೆಡುವುದು ಎಲ್ಲವೂ ನೋವು ತಂದಿದೆ. ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಿ ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನು ಓದಿ: ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ
ಬಸವಗುರು ಮಾದಾರ ಚೆನ್ನಾರ ಸ್ವಾಮೀಜಿ: ಇಂದಿನ ಪ್ರಸ್ತುತ ಸಂದರ್ಭದಲ್ಲಿ ಶಾಲೆಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಶಾಂತಿಯನ್ನು ಕಾಪಾಡಬೇಕಿದೆ. ತೀರ್ಪು ಬರುವವರೆಗೂ ಧರ್ಮಗುರುಗಳು ಶಾಂತಿಯನ್ನು ಕಾಪಾಡಲು ಶ್ರಮಿಸಬೇಕಿದೆ. ತಮ್ಮ ಧರ್ಮದವರಿಗೆ ಎಲ್ಲರೂ ಸೂಚನೆಯನ್ನು ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಇಮ್ಮಡಿ ಸಿದ್ದರಾಮೇಶ್ವರ ಗುರುಗಳು: ಭಾರತ ಜಾತ್ಯಾತೀತ ರಾಷ್ಟ್ರ, ವಿಶ್ವ ಧರ್ಮಿ ನೆಲ ನಮ್ಮದು, ಧಾರ್ಮಿಕ ವಿಚಾರಕ್ಕೆ ಗಲಾಟೆ ಆಗುತ್ತಿರುವುದು ಈ ಸಂದರ್ಭಕ್ಕೆ ಮಾತ್ರವಲ್ಲ. ಇತಿಹಾಸದಲ್ಲೇ ತಿಳಿದಂತೆ ಎಲ್ಲ ಕಾಲ ಮಟ್ಟದಲ್ಲೂ ಗದ್ದಲಗಳು ನಡೆದಿದೆ. ರಾಜ್ಯಕ್ಕೆ ಬಂದಾಗ ಕನ್ನಡಿಗ, ದೇಶ ಬಂದಾಗ ಭಾರತ. ಎಲ್ಲ ಧರ್ಮದವರು ಸಹಿಷ್ಣುತೆ ಕಾಪಾಡಲು ಮೊದಲಿಗೆ ಸಂವಿಧಾನ ಜಾರಿಯಲ್ಲಿದೆ. ಈಗಲೂ ಈ ಸಮಸ್ಯೆಗೆ ಪರಿಹಾರ ಸಂವಿಧಾನದಿಂದ ಸಿಗಲಿದೆ ಎಂಬ ನಂಬಿಕೆಯಿದೆ. ಕೋರ್ಟ್ ತೀರ್ಪಿನವರೆಗೂ ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಿ. ನ್ಯಾಯಾಲಯ ಕಾಲ, ಕಾಲಕ್ಕೆ ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳಬೇಕು, ಪಾಲಿಸಬೇಕು. ಸರ್ಕಾರಕ್ಕೆ ಈಗ ಸಂಘರ್ಷ ಹೆಚ್ಚಲಿದೆ ಎಂಬ ಸುಳಿವಿದ್ದರೆ ಆನ್‍ಲೈನ್ ಶಿಕ್ಷಣಕ್ಕೆ ಒತ್ತು ಕೊಡಿ ಎಂದು ತಿಳಿಸಿದ್ದಾರೆ.
ಮೌಲಾನ ಮಕ್ಸೂರ್ ಇಮ್ರಾನ್ : ಶಾಲೆ ಒಳಗೆ ಕೇಸರಿ, ಹಿಜಬ್ ಬಗ್ಗೆ ಎಲ್ಲ ಬಿಟ್ಟು ಬಿಡಿ. ಮೊದಲು ಮುಸ್ಮೀಂ ಹುಡುಗಿಯರು ಒಂದಲ್ಲ ಅಂತಿದ್ರು. ಈಗ ಕೇಸರಿ, ಹಿಜಬ್ ಅಂತ ಗಲಾಟೆ ಬೇಡ. ಕೇಸರಿ ಹಾಕಿಕೊಳ್ಳುತ್ತೇವೆ ಎಂದರೆ ಹಾಕಿಕೊಳ್ಳಲಿ. ಹಿಜಬ್ ಮೊದಲಿನಿಂದಲೂ ಹಾಕಲಾಗುತ್ತಿದೆ. ಈಗ ವಿವಾದ ಮಾತ್ರ ಬೇಡ. ಪರೀಕ್ಷೆಗೆ ಎಲ್ಲರೂ ಪ್ರಾಮುಖ್ಯತೆ ಕೊಡಿ. ವಿದ್ಯಾರ್ಥಿಗಳಿಗೆ ಹಿಜಬ್ ಹಾಕಿ ಬಿಡಿ ಅಂತ ಹೇಳಲ್ಲ. ನಾವು ಗುರುಗಳು ಎಲ್ಲರಿಗೂ ಇದು ಸರಿ – ತಪ್ಪು ಅಂತ ತೋರಿಸುತ್ತೇವೆ. ಹಾಗೇ ಯಾವುದಕ್ಕೂ ನಾವು ವಸ್ತ್ರಗಳ ಬಗ್ಗೆ ಸಲಹೆ ಕೊಡಲ್ಲ. ಪೊಲೀಸ್ ಹಾಕುತ್ತೇವೆ. ಹಿಜಬ್ ತೆಗೆಸುತ್ತೇವೆ ಅಂತ ಹೇಳಿಲ್ಲ. ಹಾಕಿಕೊಂಡು ಹೋಗಿ, ಹಾಕಿಕೊಂಡು ಹೋಗಬೇಡಿ ಅಂತ ನಾವು ಹೇಳುವುದಿಲ್ಲ ಎಂದಿದ್ದಾರೆ. ಇದನ್ನು ಓದಿ: ಮತ್ತೊಂದು ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಮೇಘನಾ ರಾಜ್
ಕೊನೆಯಲ್ಲಿ ಎಲ್ಲ ಹಿಂದೂ, ಮುಸ್ಮಿಂ ವಿದ್ಯಾರ್ಥಿಗಳಿಗೆ ಮನವಿ ಮಾಡುತ್ತೇನೆ. ಶಾಂತಿಯಿಂದ ಇರಿ. ಗಲಾಟೆ ಬೇಡ. ಹಿಜಬ್, ಕೇಸರಿ ಬೇಡ ಬೇಕು ಅಂತ ನಾವು ಸಂದೇಶ ಕೊಡಲ್ಲ ಎಂದು ಹೇಳುತ್ತಾ, ಕೊನೆಯಲ್ಲಿ ಎಲ್ಲ ಧರ್ಮಗುರುಗಳು ಜೈ ಹಿಂದ್ ಜೈ ಕರ್ನಾಟಕ ಎಂದು ಕೈ ಹಿಡಿದು ತೋರಿಸಿದ್ದಾರೆ.