ನವದೆಹಲಿ: ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ 2021ರ ಅತ್ಯಾಚಾರ ಪ್ರಕರಣಗಳ ವರದಿ ಬಿಡುಗಡೆ ಮಾಡಿದ್ದು, ಅತಿಹೆಚ್ಚು ಅತ್ಯಾಚಾರ ಕೇಸ್‌ಗಳು ದಾಖಲಾಗಿರುವುದು ರಾಜಾಸ್ಥಾನದಲ್ಲಿ, ಜೊತೆಗೆ ಉತ್ತರಪ್ರದೇಶ 3ನೇ ಸ್ಥಾನದಲ್ಲಿರುವುದಾಗಿ ಹೇಳಿದೆ.
Advertisement
2021ರಲ್ಲಿ ರಾಜಸ್ಥಾನದಲ್ಲಿ 6,337, ಮಧ್ಯಪ್ರದೇಶದಲ್ಲಿ 2,947, ಉತ್ತರಪ್ರದೇಶದಲ್ಲಿ 2,845 ಹಾಗೂ ಮಹಾರಾಷ್ಟ್ರದಲ್ಲಿ 2,496 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ರಾಜಸ್ಥಾನದಲ್ಲಿ 5,310 ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ವರದಿಯು ಅತ್ಯಾಚಾರ ಪ್ರಕರಣಗಳಲ್ಲಿ ಶೇ.19.34 ರಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸಿದೆ. ಇದನ್ನೂ ಓದಿ: ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ 4 ಮಹಿಳೆಯರ ಸಾವು
Advertisement
2021ರಲ್ಲಿ ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 1,452 ಅತ್ಯಾಚಾರ ಪ್ರಕರಣಗಳಲ್ಲಿ 18 ವರ್ಷ ಒಳಪಟ್ಟ ಅಪ್ರಾಪ್ತರು ಬಲಿಯಾಗಿದ್ದಾರೆ. 4 ಪ್ರಕರಣಗಳಲ್ಲಿ 60 ವರ್ಷ ಮೇಲ್ಪಟ್ಟವರು ಸಿಲುಕಿದ್ದಾರೆ. ಅರ್ಧಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು, ಕುಟುಂಬದ ಸ್ನೇಹಿತರು, ನೆರೆಯವರು ಸೇರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಇದನ್ನೂ ಓದಿ: ಮನೆಕೆಲಸದಾಕೆಗೆ ಮೂತ್ರ ಕುಡಿಸಿ ಚಿತ್ರಹಿಂಸೆ ನೀಡಿದ ನಾಯಕಿ – ಬಿಜೆಪಿಯಿಂದ ಅಮಾನತು
Advertisement
Advertisement
ಇನ್ನೂ ಮಹಿಳೆಯರ ವಿರುದ್ಧ ನಡೆದ ಅಪರಾಧ ಪ್ರಕರಣಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ 2ನೇ ಸ್ಥಾನದಲ್ಲಿದ್ದು ಶೇ.17ರಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ. ಈ ಪೈಕಿ ರಾಜಸ್ಥಾನದಲ್ಲಿ 40,738 ಪ್ರಕಣಗಳು ದಾಖಲಾಗಿದ್ದರೆ, 56,083 ಪ್ರಕರಣಗಳು ಉತ್ತರಪ್ರದೇಶದಲ್ಲಿ ದಾಖಲಾಗಿವೆ. ಒಟ್ಟಿನಲ್ಲಿ ಈ ಬಾರಿಯ ಎನ್‌ಸಿಆರ್‌ಬಿ ವರದಿಯು ಅಪರಾಧ ಹೆಚ್ಚಿದಂತೆ ಅಪರಾಧಗಳ ನೋಂದಣಿಯೂ ಹೆಚ್ಚಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದೆ.