ನವದೆಹಲಿ: ಮುಡಾ ಪ್ರಕರಣ (MUDA Scam) ದೇಶದ್ಯಾಂತ ಚರ್ಚೆಯಾಗುತ್ತಿದೆ. ಕಾಂಗ್ರೆಸ್ (Congress) ಡಿಎನ್‌ಎಯಲ್ಲಿ ಭ್ರಷ್ಟಾಚಾರ ಇದೆ ಎಂದು ಹಿಂದೆಯೇ ಹೇಳಿದ್ದೆ. ಅದಕ್ಕೆ ಪೂರಕವಾದ ಆದೇಶವನ್ನು ಹೈಕೋರ್ಟ್ (High Court) ನೀಡಿದೆ. ಮೇಲ್ನೋಟಕ್ಕೆ ಮುಖ್ಯಮಂತ್ರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.
ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದಲ್ಲಿ ಸಿಎಂ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೈಕೋರ್ಟ್ ಹೇಳಿದೆ. ಸಾಮಾನ್ಯ ವ್ಯಕ್ತಿಗೆ ಈ ಪ್ರಮಾಣದಲ್ಲಿ ಪರಿಣಾಮ ನೀಡಲು ಸಾಧ್ಯವಿಲ್ಲ. ಹೈಕೋರ್ಟ್ ಆದೇಶದ ಹಿನ್ನಲೆ ಮುಖ್ಯಮಂತ್ರಿ ಸ್ಥಾನಕ್ಕೆ ತಡ ಮಾಡದೇ ಸಿದ್ದರಾಮಯ್ಯ (CM Siddaramaiah) ಅವರು ರಾಜೀನಾಮೆ ನೀಡಬೇಕು ಎಂದರು.ಇದನ್ನೂ ಓದಿ: ಮುಡಾ ಕೇಸ್: ಕಾನೂನಾತ್ಮಕವಾಗಿ ಮುಂದೇನು? ಕಾಂಗ್ರೆಸ್ ಹೈಕಮಾಂಡ್ ಮುಂದಿರುವ ಆಯ್ಕೆಗಳೇನು?
ದಲಿತರ ಕೋಟಿ ಬೆಲೆ ಬಾಳುವ ಭೂಮಿಯನ್ನು ಲಕ್ಷಗಳಲ್ಲಿ ಖರೀದಿಸಿ, ಸಿಎಂ ಹೆಂಡ್ತಿಗೆ ಗಿಫ್ಟ್ ನೀಡುವುದು ಹಾಸ್ಯಾಸ್ಪದ, ಇಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ರಾಜ್ಯಪಾಲರು, ದಲಿತ ನಾಯಕರಿಗೆ ಚಪ್ಪಲಿಯಿಂದ ಹೊಡೆಸುವ ಯತ್ನ ಮಾಡಿದೆ. ಈಗಲಾದರೂ ಸಿಎಂ ಬಹಿರಂಗ ಕ್ಷಮೆ ಕೇಳುವ ಮೂಲಕ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ (Rahul Gandhi) ಡೋಂಗಿ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ನಿಜವಾದ ನೈತಿಕತೆ ಇದ್ದರೆ ಅವರು ಸಿದ್ದರಾಮಯನವರ ರಾಜೀನಾಮೆ ಕೇಳಬೇಕು. ಲೋಕಾಯುಕ್ತದಲ್ಲಿ ನಿವೃತ್ತ ನ್ಯಾಯಾಧೀಶರು ಇರುತ್ತಾರೆ. ಬಾಕಿ ಅಧಿಕಾರಿಗಳು ರಾಜ್ಯ ಸರ್ಕಾರದವರೇ ಇರುತ್ತಾರೆ. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದರೆ ಸಿಬಿಐಗೆ ನೀಡಬೇಕು. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ನೀಡಲಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಪುಲ್ವಾಮಾ ದಾಳಿಯ ಪ್ರಮುಖ ಆರೋಪಿ ಹೃದಯಾಘಾತದಿಂದ ಸಾವು