ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ

Published by
Public TV
Advertisements

ಭೋಪಾಲ್: ಮಧ್ಯಪ್ರದೇಶದ (Madhya Pradesh) ಜಬಲ್‍ಪುರದ ಹೈಕೋರ್ಟ್‍ನಲ್ಲಿ (High Court) ನ್ಯಾಯಾಧೀಶರೊಂದಿಗೆ ನಡೆದ ವಾಗ್ವಾದದ ನಂತರ ವಕೀಲರೊಬ್ಬರು (Lawyer) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

Advertisements

ವಕೀಲ ಅನುರಾಗ್ ಸಾಹು ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರೊಂದಿಗೆ ವಾಗ್ವಾದ ನಡೆಸಿದ್ದರು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಕೀಲರು ಆತನ ಶವವನ್ನು ನ್ಯಾಯಾಲಯದ ಆವರಣಕ್ಕೆ ಕೊಂಡೊಯ್ದು ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಭಟನಾ ನಿರತ ವಕೀಲರು ನ್ಯಾಯಾಲಯದ ಕೊಠಡಿಗಳನ್ನು ಧ್ವಂಸಗೊಳಿಸಿ, ಹಿರಿಯ ವಕೀಲರ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದಾರೆ.

Advertisements

ಘಟನೆಗೆ ಸಂಬಂಧಿಸಿ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನ್ಯಾಯಾಲಯದ ಎದುರೇ ಕುಳಿತು ಧರಣಿ ಮಾಡಿದರು. ಆದರೆ ಪ್ರತಿಭಟನೆಯೂ ಅತಿರೇಕಕ್ಕೆ ಹೋದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಅಷ್ಟೇ ಅಲ್ಲದೇ ನ್ಯಾಯಾಲಯದ ರಕ್ಷಣೆಗೆ ವಿಶೇಷ ಕಾರ್ಯಪಡೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಘಟನೆಗೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಬಹುಗುಣ ಮಾತನಾಡಿ, ಅನುರಾಗ್ ಸಾಹು ಯಾವ ಹೇಳಿಕೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರತಿಭಟನೆ ವೇಳೆ ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಂದ ಬ್ಲಾಕ್ ಮೇಲ್- ಜನರಿಂದ ಬಿತ್ತು ಗೂಸಾ

Advertisements

ಕೌನ್ಸಿಲ್ ಉಪಾಧ್ಯಕ್ಷ ಆರ್‍ಕೆ ಸಿಂಗ್ ಸೈನಿ ಮಾತನಾಡಿ, ಅನುರಾಗ್ ಸಾಹು ಅವರು ಕೆಲವು ಅಧಿಕಾರಿಗಳು ಮತ್ತು ವಕೀಲರಿಂದ ಕಿರುಕುಳವನ್ನು ಎದುರಿಸುತ್ತಿದ್ದರು. ಅದನ್ನು ವಿರೋಧಿಸಿ ಪ್ರತಿಭಟಿಸಿದ್ದ ವಕೀಲರ ಮೇಲೆ ನಿರ್ದಾಕ್ಷಿಣ್ಯವಾಗಿ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ದಸರಾ, ದೀಪಾವಳಿಗೆ ಬೆಂಗಳೂರಿನಿಂದ ವಿಶೇಷ ರೈಲು – ಎಲ್ಲೆಲ್ಲಿಗೆ ಒಮ್ಮೆ ನೋಡಿ

Live Tv

Advertisements