ತಿರುವನಂತಪುರಂ: ಇನ್ಮುಂದೆ ಲೆಸ್ಬಿಯನ್ ದಂಪತಿ ಒಟ್ಟಿಗೆ ವಾಸಿಸಬಹುದು ಎಂದು ಕೇರಳ ಹೈಕೋರ್ಟ್ ಇಂದು ಅನುಮತಿ ನೀಡಿದೆ.
Advertisement
ಅಧಿಲಾ ನಸ್ರಿನ್ ಮತ್ತು ಫಾತಿಮಾ ನೂರಾ ಒಟ್ಟಿಗೇ ವಾಸಿಸಲು ಅನುಮತಿ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಲೆಸ್ಬಿಯನ್ ದಂಪತಿ ಒಟ್ಟಿಗೆ ವಾಸಿಸಲು ಅನುಮತಿ ನೀಡಿದೆ. ಇದನ್ನೂ ಓದಿ: 21 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ – ಕರ್ನಾಟಕಕ್ಕೆ 8 ಸಾವಿರ ಕೋಟಿ ಬಿಡುಗಡೆ
Advertisement
ಕಳೆದ ವಾರ ತನ್ನ ಸಂಗಾತಿ ಫಾತಿಮಾಳನ್ನು ಆಕೆಯ ಸಂಬಂಧಿಕರು ಅಪಹರಿಸಿದ್ದಾರೆ ಎಂದು ಅಧಿಲಾ ನಸ್ರಿನ್ ಆರೋಪಿಸಿದ್ದರು. ಈ ಸಂಬಂಧ ಪೊಲೀಸರಿಗೂ ದೂರು ನೀಡಿದ್ದರು.
Advertisement
Advertisement
22 ವರ್ಷದ ಅಧಿಲಾ ಮತ್ತು 23 ವರ್ಷದ ಫಾತಿಮಾ ಸೌದಿ ಅರೇಬಿಯಾದಲ್ಲಿ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಭೇಟಿಯಾಗಿದ್ದರು. ನಂತರ ಅವರು ಒಟ್ಟಿಗೇ ವಾಸಿಸಲು ನಿರ್ಧರಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ
ನಂತರ ಆದಿಲಾ ಅವರ ಪೋಷಕರು ಇಬ್ಬರನ್ನೂ ಆಲುವಾದಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ದಿದ್ದರು. ಆದರೆ ನೂರಾ ಸಂಬಂಧಿಕರು ಅಲುವಾಕ್ಕೆ ಬಂದು ನೂರಾಳನ್ನು ಅಪಹರಿಸಿಕೊಂಡು ಹೋಗಿದ್ದರು. ಆದಿಲಾ ಮೇ 30 ರಂದು ಕೇರಳ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ, ಒಟ್ಟಿಗೆ ವಾಸಿಸಲು ಅವಕಾಶ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಒಟ್ಟಿಗೆ ವಾಸಿಸಲು ಅನುಮತಿ ನೀಡಿದೆ.