ಬೆಂಗಳೂರು: ಕೃಷ್ಣರಾಜ ಸಾಗರ (KRS) ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ (High Court) ಮಹತ್ವದ ಆದೇಶ ಪ್ರಕಟಿಸಿದೆ.
ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ (Mining) ನಡೆಸಬಾರದು. ಕೆಆರ್‌ಎಸ್ ಜಲಾಶಯಕ್ಕೆ ಹಾನಿ ಮಾಡುವುದನ್ನು ತಡೆಗಟ್ಟಬೇಕಿದೆ. ಕೆಆರ್‌ಎಸ್ ಸುರಕ್ಷತೆ ನಮಗೆ ಮುಖ್ಯ ಎಂದು ಹೈಕೋರ್ಟ್ ಮುಖ್ಯ ನಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗಿಯ ಪೀಠ ಹೇಳಿದೆ. ಇದನ್ನೂ ಓದಿ: ಏಳು ಸುತ್ತಿನ ಕೋಟೆಯಾದ ಅಯೋಧ್ಯೆ – 30,000 ಯೋಧರು, AI ಕಣ್ಗಾವಲು – ಭದ್ರತೆಗೆ ವಿಶೇಷ ತಂಡಗಳ ನಿಯೋಜನೆ
ಭೂಪರಿವರ್ತನೆಗೂ ಮುನ್ನ ಪರೀಕ್ಷಾರ್ಥ ಸ್ಫೋಟ ನಡೆಸಿ ಹಾನಿ ಸಾಧ್ಯತೆ ಪರಿಗಣಿಸಿ ಅನುಮತಿಯ ಷರತ್ತು ಹಾಕಿದ್ದ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಪ್ರಕಟಿಸಿದೆ.
ಸರ್ಕಾರದ ನಿರ್ದೇಶನದಂತೆ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಲಾಗಿದ್ದು, ಅಲ್ಲಿಯವರೆಗೆ ಗಣಿಗಾರಿಕೆಗೆ ಅನುಮತಿಸುವುದಿಲ್ಲ. ಗಣಿಗಾರಿಕೆಗೆ ಆದೇಶ ನೀಡಿದರೆ ಕೆಆರ್‌ಎಸ್ ಜಲಾಶಯಕ್ಕೆ ಭಾರೀ ಹಾನಿಯಾಗಲಿದೆ. ಕೆಆರ್‌ಎಸ್ ಅನ್ನು ಅಲ್ಲಿನ ಜನರ ರಕ್ತ ಮತ್ತು ಬೆವರಿನಿಂದ ಕಟ್ಟಲಾಗಿದೆ. ಜಲಾಶಯಕ್ಕೆ (Dam) ಏನಾದರೂ ತೊಂದರೆಯಾದರೆ ಏನು ಮಾಡುವುದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಾಲೂರು ಶಾಸಕ ನಂಜೇಗೌಡ ಮನೆ ಮೇಲೆ ಇಡಿ ದಾಳಿ
ಕೆಆರ್‌ಎಸ್ ಸುರಕ್ಷತೆಯೇ ನಮಗೆ ಮುಖ್ಯವಾಗಿದೆ. ಈ ಕಾರಣಕ್ಕೆ ಕೆಆರ್‌ಎಸ್ ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು ಎಂದು ವಿಭಾಗೀಯ ಪೀಠ ಆದೇಶ ಪ್ರಕಟಿಸಿದೆ.