ರಾಯಚೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ಹಿನ್ನೆಲೆ ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ (Mantralayam) ಆಂಧ್ರಪ್ರದೇಶ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವುದರಿಂದ ಗುರು ರಾಘವೇಂದ್ರ ಸ್ವಾಮಿ ಮಠ ಹಾಗೂ ಮಂತ್ರಾಲಯದಲ್ಲಿ ತೀವ್ರ ತಪಾಸಣೆ ಮಾಡಲಾಯಿತು.
ಮುನ್ನೆಚ್ಚರಿಕೆಯಾಗಿ ಹಾಗೂ ಜಾಗೃತಿ ಮೂಡಿಸಲು ಪೊಲೀಸರು ಮಂತ್ರಾಲಯದಲ್ಲಿ ತೀವ್ರ ತಪಾಸಣೆ ನಡೆಸಿದರು. ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್‌ನಿಂದ ಮಠದ ಪ್ರಾಂಗಣ, ಭೋಜನ ಶಾಲೆ, ತುಂಗಭದ್ರಾ ನದಿ ತೀರ, ಬಸ್ ನಿಲ್ದಾಣ, ವ್ಯಾಪಾರಿ ಮಳಿಗೆಗಳು, ವಸತಿಗೃಹಗಳು, ಮಂತ್ರಾಲಯಕ್ಕೆ ಬರುವ ಬಸ್ ,ಕಾರುಗಳಲ್ಲಿ ಶೋಧ ನಡೆಸಿದರು. ಭಕ್ತರ ಬ್ಯಾಗ್‌ಗಳನ್ನ ಸಹ ತಪಾಸಣೆ ಮಾಡಲಾಯಿತು. ಇದನ್ನೂ ಓದಿ: Pahalgam Attack | AK-47, M4 ರೈಫಲ್ ಹೊತ್ತು, ದಟ್ಟ ಕಾಡಿನಲ್ಲಿ 22 ಗಂಟೆ ನಡೆದುಕೊಂಡೇ ಬಂದಿದ್ದ ಉಗ್ರರು
ಮಂತ್ರಾಲಯ ಮಠಕ್ಕೆ ಸಾವಿರಾರು ಭಕ್ತರು ಬರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ಮೂಲಕ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದ್ದಾರೆ. ಭದ್ರತೆ ಬಿಗಿಗೊಳಿಸಲು ಮಂತ್ರಾಲಯ ಮಠದ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ಮಂತ್ರಾಲಯಂ ಹಾಗೂ ಮಾಧವರಂ ಠಾಣೆ ಪೊಲೀಸರಿಂದ ತಪಾಸಣೆ ನಡೆಯಿತು. ಇದನ್ನೂ ಓದಿ: ಭಾರತ ತೊರೆಯದ ಪಾಕ್ ಪ್ರಜೆಗಳಿಗೆ 3 ವರ್ಷ ಜೈಲು, 3 ಲಕ್ಷ ದಂಡ