ಕಾರವಾರ: ಪಾಕಿಸ್ತಾನದ ಸಂಭಾವ್ಯ ದಾಳಿ ಹಿನ್ನೆಲೆಯಲ್ಲಿ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಅರಬ್ಬೀ ಸಮುದ್ರದ ಆಳ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಮರಳಿ ತೀರಕ್ಕೆ ನಿರ್ಗಮಿಸುವಂತೆ ನೌಕಾದಳವು ಸೂಚನೆ ನೀಡಿದ್ದು, ಕರಾವಳಿ ತೀರದಿಂದ 12, 18 ನಾಟಿಕನ್ ಮೈಲು ದೂರದ ಗುಜರಾತ್, ಗೋವಾ ಭಾಗದ ಬುಲ್‍ಟ್ರಾಲ್, ಪರ್ಷಿಯನ್ ಬೋಟ್ ಗಳನ್ನು ಮರಳಿ ಬಂದರಿಗೆ ಬುಧವಾರ ಮಧ್ಯರಾತ್ರಿಯಿಂದ ನೌಕಾದಳ ಕಳುಹಿಸುತ್ತಿದೆ.
Advertisement
Advertisement
ಗುಜರಾತ್ ಹಾಗೂ ಗೋವಾ ಭಾಗಕ್ಕೆ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆಯನ್ನು ಸಹ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಆಳ ಸಮುದ್ರಕ್ಕೆ ತೆರಳಿದ ಮಂಗಳೂರು, ಉಡುಪಿ ಜಿಲ್ಲೆಯ ಹಲವು ಬೋಟುಗಳು ಮರಳಿ ತೀರದ ಕಡೆ ನಿರ್ಗಮಿಸುತ್ತಿವೆ.
Advertisement
ಕಾರವಾರದ ಕರಾವಳಿ ಕಾವಲುಪಡೆ, ಕಸ್ಟಮ್ಸ್, ಮೀನುಗಾರಿಕಾ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್ ನೋಟಿಸ್ ಜಾರಿ ಮಾಡಿದ್ದು, ಮೀನುಗಾರಿಕೆಗೆ ಯಾವುದೇ ನಿರ್ಬಂಧ ಹೇರದಿದ್ದರೂ ಮೀನುಗಾರಿಕೆ ಚಟುವಟಿಕೆ ಕುರಿತು ಪ್ರತಿ ದಿನದ ಮಾಹಿತಿ ನೀಡುವಂತೆ ನೋಟೀಸ್ ನಲ್ಲಿ ಸೂಚನೆ ನೀಡಿದೆ. ಈ ಮೂಲಕ ಕರಾವಳಿಯಲ್ಲಿ ನೌಕಾದಳ ಹದ್ದಿನ ಕಣ್ಣಿಟ್ಟಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv