ಆಂಧ್ರ ಕಾಲೇಜಿನ ವಿದ್ಯಾರ್ಥಿನಿಯರ ವಾಶ್ ರೂಮ್‍ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾರಾಟ – ಆರೋಪಿ ಅರೆಸ್ಟ್

Public TV
1 Min Read
Hidden Camera In Andhra College Toilet Student Who Sold Videos Arrested

– ಹಣಕ್ಕಾಗಿ 300 ಫೋಟೋ, ವಿಡಿಯೋ ಮಾರಾಟ

ಅಮರಾವತಿ: ಆಂಧ್ರಪ್ರದೇಶದ (Andhra Pradesh) ಇಂಜಿನಿಯರಿಂಗ್ ಕಾಲೇಜೊಂದರ (College) ವಿದ್ಯಾರ್ಥಿನಿಯರ ಹಾಸ್ಟೆಲ್‍ನ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾ (Hidden Camera) ಪತ್ತೆಯಾಗಿದ್ದು, ವಿಡಿಯೋ ಸೆರೆ ಹಿಡಿದು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣನ್ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಈ ಪ್ರಕರಣ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಸಂಜೆ ವಾಶ್‍ರೂಮ್‍ನಲ್ಲಿ ಮುಚ್ಚಿಟ್ಟಿದ್ದ ವಸ್ತುವನ್ನು ವಿದ್ಯಾರ್ಥಿನಿ ಗಮನಿಸಿದ್ದಾಳೆ. ಆ ವಸ್ತುವನ್ನು ನೋಡಿದಾಗ ಕ್ಯಾಮೆರಾ ಇರುವುದು ಪತ್ತೆಯಾಗಿದೆ. ಕ್ಯಾಮೆರಾ ಪರಿಶೀಲಿಸಿದಾಗ ವಿಡಿಯೋಗಳನ್ನು ನೋಡಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧ ವಿದ್ಯಾರ್ಥಿಗಳ ಹಾಸ್ಟೆಲ್‍ನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ವಿಜಯ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಲ್ಯಾಪ್‍ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಶ್‍ರೂಮ್‍ನಲ್ಲಿರುವ ವಿದ್ಯಾರ್ಥಿನಿಯರ 300ಕ್ಕೂ ಹೆಚ್ಚು ಫೋಟೋಗಳು ಮತ್ತು ವೀಡಿಯೊಗಳು ಸೋರಿಕೆಯಾಗಿದ್ದು, ಹಣ ಕೊಟ್ಟು ಕೆಲವು ವಿದ್ಯಾರ್ಥಿಗಳು ಆರೋಪಿ ವಿಜಯ್‍ನಿಂದ ವೀಡಿಯೊಗಳನ್ನು ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article