ಎರಡು ಭಾಗಗಳಲ್ಲಿ ಬರಲಿದೆ ‘ಹಾಯ್ ನಾನ್ನಾ’ ಡೈರೆಕ್ಟರ್‌ ಜೊತೆಗಿನ ಜ್ಯೂ.ಎನ್‌ಟಿಆರ್‌ ಹೊಸ ಸಿನಿಮಾ

Public TV
1 Min Read
jr ntr

ಟ ಜ್ಯೂ.ಎನ್‌ಟಿಆರ್ (Jr.Ntr) ಪ್ರಸ್ತುತ ಟಾಲಿವುಡ್ ಮತ್ತು ಬಾಲಿವುಡ್ (Bollywood) ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಆರ್‌ಆರ್‌ಆರ್’ (RRR) ಸಕ್ಸಸ್ ನಂತರ ತಾರಕ್ ಬೇಡಿಕೆ ಹೆಚ್ಚಾಗಿದೆ. ಇದೀಗ ಅವರ ಮುಂದಿನ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿ ಸಿಕ್ಕಿದೆ. ‘ದೇವರ’ ಚಿತ್ರದಂತೆಯೇ 2 ಭಾಗಗಳಲ್ಲಿ ಬರಲಿರುವ ಹೊಸ ಚಿತ್ರಕ್ಕೆ ನಟ ಗ್ರೀನ್ ಸಿಗ್ನಲ್ ನೀಡಿದ್ದಾರೆ.

jr ntr 1

ಕಳೆದ ವರ್ಷ ‘ಹಾಯ್ ನಾನ್ನಾ’ (Hai Nanna) ಚಿತ್ರದ ಮೂಲಕ ಸಕ್ಸಸ್ ಕಂಡ ಶೌರ್ಯ ಈಗ ಜ್ಯೂ.ಎನ್‌ಟಿಆರ್‌ಗೆ ಆ್ಯಕ್ಷನ್ ಥ್ರಿಲರ್ ಕತೆಯೊಂದನ್ನು ಹೇಳಿದ್ದಾರೆ. ಇದು ಜ್ಯೂ.ಎನ್‌ಟಿಆರ್‌ಗೂ ಇಷ್ಟವಾಗಿ ಸಿನಿಮಾಗೆ ಓಕೆ ಎಂದಿದ್ದಾರೆ. ಸದ್ಯ ಎರಡು ಭಾಗಗಳಲ್ಲಿ ಸಿನಿಮಾ ಬರಲಿದೆ. ಮೊದಲ ಭಾಗದ ಸ್ಕ್ರಿಪ್ಟ್ ಈಗಾಗಲೇ ರೆಡಿಯಾಗಿದೆ. ಇದನ್ನೂ ಓದಿ:ಮಕ್ಕಳ ಜೊತೆ ರಾಧಿಕಾ ಪಂಡಿತ್ ವೆಕೇಷನ್- ಯಶ್ ಎಲ್ಲಿ ಎಂದ ಫ್ಯಾನ್ಸ್

shouryuv

ಈಗಾಗಲೇ ಜ್ಯೂ.ಎನ್‌ಟಿಆರ್ ಒಪ್ಪಿಕೊಂಡಿರುವ ಸಿನಿಮಾ ಪೂರ್ಣಗೊಳಿಸಬೇಕಿದೆ. ಹಾಗಾಗಿ ಈ ಚಿತ್ರ 2026ರಲ್ಲಿ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ:ಶ್ರೀವಲ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಕಿರುತೆರೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

ಅಂದಹಾಗೆ, ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಜೊತೆ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ನಟಿಸಿದ್ದಾರೆ. ಬಾಲಿವುಡ್ ಚಿತ್ರ ‘ವಾರ್ 2’ನಲ್ಲಿ ಹೃತಿಕ್ ರೋಷನ್ ಜೊತೆ ಕಾಣಿಸಿಕೊಂಡಿದ್ದಾರೆ. ಇದರ ನಂತರ ಪ್ರಶಾಂತ್ ನೀಲ್ (Prashanth Neel) ಜೊತೆ ‘ಡ್ರ್ಯಾಗನ್’ ಸಿನಿಮಾ ಮಾಡಲಿದ್ದಾರೆ. ಇದಿಷ್ಟು ಸಿನಿಮಾಗಳ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

Share This Article