ಮಂಗಳೂರು: ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ (ರಿ) ಮಂಗಳೂರು ಇದರ ವಾರ್ಷಿಕೋತ್ಸವ ದಿನಾಚರಣೆ ಇತ್ತೀಚಿಗೆ ನಗರದ ಬೆಂದೂರಿನ ಸೇಂಟ್ ಸೆಬಾಸ್ಟಿಯನ್ ಹಾಲ್‌ನಲ್ಲಿ ನಡೆಯಿತು.
ಸಮಾರಂಭವನ್ನು ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನೂರ್ ಜಹರ ಖಾನಂ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಅಧ್ಯಕ್ಷ ಸಿ.ಎ.ಶಾಂತರಾಮ್ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದ.ಕ. ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಫೈಸ್ ಭಾಗಿಯಾಗಿದ್ದರು. ಇದನ್ನೂ ಓದಿ: ಎಲ್.ಕೆ ಅಡ್ವಾಣಿ ಆರೋಗ್ಯ ಸ್ಥಿರ – ಆಸ್ಪತ್ರೆಯಿಂದ ಡಿಸ್ಚಾರ್ಜ್
Advertisement
ಆರ್‌ಎಸ್‌ಎಫ್‌ಐ ರಾಷ್ಟ್ರೀಯ ಮಟ್ಟದ ಸಾಧಕ ಸ್ಕೇಟಿಂಗ್ ಪಟುಗಳಾದ ಶಾಮಿಲ್, ಅರ್ಪಿತಾ, ಡಾಶಿಯಲ್, ಮೋಕ್ಷ ಮತ್ತು ಡೇನಿಯಲ್ ಹಾಗೂ ಆರ್‌ಎಸ್‌ಎಫ್‌ಐ ರಾಜ್ಯ ಸಾಧಕರಾದ ಹಿಮಾನಿ, ಕೇಟ್, ತನ್ಮಯ್ ಮತ್ತು ವಿವೇಕ್ ಅವರಿಗೆ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಜು.23 ರಂದು ʼಮೋದಿ 3.0ʼ ಬಜೆಟ್ ಮಂಡನೆ
Advertisement
ಕ್ಲಬ್ ಅಧ್ಯಕ್ಷ ಅರ್ಷದ್ ಹುಸೇನ್ ಅತಿಥಿಗಳನ್ನು ಸ್ವಾಗತಿಸಿದರು. ನಸೀಹ ಶಾ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್ ನ ಪೋಷಕರು ಹಾಗೂ ಮಕ್ಕಳು ಮನರಂಜನೆ ಕಾರ್ಯಕ್ರಮ ನೀಡಿದರು.