ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ (Visvesvaraya Technological University) ಹೆಸ್ಕಾಂ (HESCOM) ಬರೋಬ್ಬರಿ 18 ಲಕ್ಷ ರೂ. ಬಿಲ್ ಅನ್ನು ನೀಡಿದ್ದು, ಜೂನ್ ತಿಂಗಳ ವಿದ್ಯುತ್ ಬಿಲ್ (Electricity Bill) ಕಂಡು ಬೆಳಗಾವಿ (Belagavi) ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್ ಹೌಹಾರಿದ್ದಾರೆ.
ಕಾಂಗ್ರೆಸ್ (Congress) ಸರ್ಕಾರ ರಾಜ್ಯದ ಜನತೆಗೆ ಉಚಿತ 200 ಯೂನಿಟ್ ವಿದ್ಯುತ್ ನೀಡುವ ಭರವಸೆ ನೀಡಿದ ಬೆನ್ನಲ್ಲೇ ವಿದ್ಯುತ್ ದರ ಏಕಾಏಕಿ ಏರಿಕೆಯಾಗಿದ್ದು, ಜನರು ಶಾಕ್ ಆಗಿದ್ದಾರೆ. ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಏರಿಕೆ ಹಿನ್ನಲೆ ವಿದ್ಯುತ್ ದರ ಏರಿಕೆಯಿಂದ ಬೆಳಗಾವಿಯ ವಿಟಿಯುಗೆ 5 ಲಕ್ಷ ರೂ. ಹೆಚ್ಚುವರಿ ಬಿಲ್ ಬಂದಿದ್ದು, ವಿದ್ಯುತ್ ಬಿಲ್‌ನಿಂದ ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಶಾಕ್‌ಗೆ ಒಳಗಾಗಿದ್ದಾರೆ. ಇದನ್ನೂ ಓದಿ: ಸಿಎಂ ಅವ್ರೇ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ- 2018ರ ಪಬ್ಲಿಕ್ ಟಿವಿ ವರದಿ ತೆಗೆದು ಸರ್ಕಾರಕ್ಕೆ ತಿವಿದ ಯತ್ನಾಳ್
ರಾಜ್ಯದ ಐದು ಕಡೆ ವಿಭಾಗೀಯ ಕೇಂದ್ರಗಳನ್ನು ಹೊಂದಿರುವ ವಿಟಿಯು ವಿಭಾಗೀಯ ಕೇಂದ್ರ ಹಾಗೂ ವಿಟಿಯು ಕ್ಯಾಂಪಸ್ ಸೇರಿ ಜೂನ್ ತಿಂಗಳಲ್ಲಿ 35 ಲಕ್ಷ ರೂ. ಬಿಲ್ ಬಂದಿದೆ. ಅದರಲ್ಲಿ ಬೆಳಗಾವಿಯಲ್ಲಿರುವ ವಿಟಿಯು ಕ್ಯಾಂಪಸ್ಸಿನ ಈ ತಿಂಗಳ ಬಿಲ್ 18 ಲಕ್ಷ ರೂ. ಎಂದು ನಮೂದಿಸಲಾಗಿದೆ. ವಿಟಿಯು ಮುಖ್ಯ ಕ್ಯಾಂಪಸ್ ಸೇರಿ 6 ವಿಭಾಗೀಯ ಕೇಂದ್ರಗಳ ಮೇ ತಿಂಗಳ ವಿದ್ಯುತ್ ಬಿಲ್ 35 ಲಕ್ಷ ರೂ.ಬಂದಿದ್ದು, ಮಾರ್ಚ್ ತಿಂಗಳಲ್ಲಿ 25,56,958 ರೂ. ಹಾಗೂ ಏಪ್ರಿಲ್ ತಿಂಗಳಲ್ಲಿ 25,29,021 ರೂ. ವಿದ್ಯುತ್ ಬಿಲ್ ಪಾವತಿಸಿದೆ. ಇದನ್ನೂ ಓದಿ: ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ
ಮೇ ತಿಂಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 35,05,869 ರೂ. ಬಿಲ್ ನೀಡಿದೆ. ಆದರೆ ಈಗ ಏಕಾಏಕಿ 10 ಲಕ್ಷ ಬಿಲ್ ಬಂದಿರುವುದಕ್ಕೆ ವಿಟಿಯು ಆಡಳಿತ ಮಂಡಳಿ ಕಂಗಾಲಾಗಿದ್ದು, 10 ಲಕ್ಷ ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಹೆಸ್ಕಾಂಗೆ ಪತ್ರಬರೆಯಲು ವಿಟಿಯು ಮುಂದಾಗಿದೆ. ಅಲ್ಲದೇ ಗೊಂದಲ ಬಗೆಹರಿದ ಬಳಿಕವಷ್ಟೇ ಹೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಲು ವಿಟಿಯು ನಿರ್ಧಾರ ಮಾಡಿದೆ. ಇದನ್ನೂ ಓದಿ: ಹೆಂಡತಿ ನನ್ನ ಮಾತು ಕೇಳುತ್ತಿಲ್ಲ, ದಯಮಾಡಿ ಪರಿಹರಿಸಿ- ಶಾಸಕರಿಗೆ ವ್ಯಕ್ತಿ ದೂರು