Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!

Cinema

ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!

Public TV
Last updated: April 9, 2025 1:17 pm
Public TV
Share
2 Min Read
Charithra Rao
SHARE

ಹೊಸಬರೇ ಸೇರಿ ರೂಪಿಸಿದ್ದ ‘ಇಂಟರ್ವಲ್‌’ (Interval Film) ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಈ ಕಾರಣದಿಂದಲೇ ಯಶಸ್ವಿಯಾಗಿ 25 ದಿನಗಳನ್ನು ದಾಟಿಕೊಂಡಿದೆ. ಪ್ರಚಾರದ ಯಾವ ಪಟ್ಟುಗಳನ್ನೂ ಪ್ರದರ್ಶಿಸದೆ, ತನ್ನೊಳಗಿನ ಕಸುವಿ ಮೂಲಕವೇ ಇಂಥಾದ್ದೊಂದು ಮೈಲಿಗಲ್ಲನ್ನು ಕ್ರಮಿಸುವಂತಾಗಿದೆ. ಈ ಚಿತ್ರದ ಮೂಲಕ ‘ಸತ್ಯ’ ಸೀರಿಯಲ್‌ನ ಬಾಲಾ ಎಂಬ ಪಾತ್ರದ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದ ಶಶಿರಾಜ್ (Shashiraj) ನಾಯಕನಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಇವರೊಂದಿಗೆ ಇನ್ನೂ ಒಂದಷ್ಟು ಮಂದಿ ಪ್ರತಿಭಾನ್ವಿತರು ‘ಇಂಟರ್ವಲ್‌’ ಭೂಮಿಕೆಯಲ್ಲಿ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಆ ಸಾಲಿನಲ್ಲಿ ನಾಯಕಿಯರಲ್ಲೊಬ್ಬರಾಗಿ ನಟಿಸಿರುವ ಚರಿತ್ರಾ ರಾವ್ (Charithra Rao) ಕೂಡ ಸೇರಿಕೊಂಡಿದ್ದಾರೆ. ಈ ಸಿನಿಮಾದ ಚೆಂದದ ಪಾತ್ರದ ಮೂಲಕ ಚರಿತ್ರಾ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದನ್ನೂ ಓದಿ:ಇಂಟರ್ವಲ್ ಬಗ್ಗೆ ಸೃಷ್ಟಿಕರ್ತ ಸುಕಿ ತೆರೆದಿಟ್ಟ ಬೆರಗಿನ ಸಂಗತಿ!

Charithra Rao 1ಮೂಲತಃ ರಂಗಭೂಮಿಯ ನಂಟು ಹೊಂದಿರುವ ಚರಿತ್ರಾ ರಾವ್ (Charithra Rao) ಭರತನಾಟ್ಯ ಕಲಾವಿದೆಯೂ ಹೌದು. ಸಿನಿಮಾ ನಾಯಕಿಯಾಗಲು ಬೇಕಾದ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿರುವ ಚರಿತ್ರಾ ಪಾಲಿಗೆ ಸಿನಿಮಾ ಅನ್ನೋದು ಎಳವೆಯಿಂದಲೇ ಆವರಿಸಿಕೊಂಡಿದ್ದ ಸೆಳೆತ. ಇದೀಗ ‘ಇಂಟರ್ವಲ್‌’ ಚಿತ್ರಕ್ಕೆ ಆಡಿಷನ್ ಕೊಟ್ಟು ಆಯ್ಕೆಯಾಗಿದ್ದ ಅವರು ನಾಯಕಿಯಾಗಿ, ಚೆಂದದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಸ್ವತಂತ್ರವಾಗಿ ಬದುಕ ಬಯಸುವ ಸ್ವಾಭಿಮಾನಿ ಹುಡುಗಿಯ ಪಾತ್ರಕ್ಕಿಲ್ಲಿ ಚರಿತ್ರಾ ರಾವ್ ಜೀವ ತುಂಬಿದ್ದಾರೆ. ಈಗಾಗಲೇ ಒಂದಷ್ಟು ಸೀರಿಯಲ್ಲುಗಳಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡಿರುವ ಈಕೆಯ ಪಾಲಿಗೆ ‘ಇಂಟರ್ವಲ್‌’ ಚಿತ್ರದ ಮೂಲಕ ಹಿರಿತೆರೆಯ ಅವಕಾಶಗಳ ಬಾಗಿಲು ತೆರೆದುಕೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ:ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು

HEROINES scaledಎಂಬಿಎ ಪದವೀಧರೆಯಾಗಿರುವ ಚರಿತ್ರಾ ಈಗಾಗಲೇ ಭರತನಾಟ್ಯ ಕಲಾವಿದೆಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಸೈ ಅನ್ನಿಸಿಕೊಂಡಿರುವ ಚರಿತ್ರಾ, ಶಿವರಾತ್ರಿಯ ಪ್ರಯುಕ್ತ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿಯೂ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಇವರ ತಾಯಿ ಕೂಡಾ ರಂಗಭೂಮಿ ಕಲಾವಿದೆಯಾಗಿ ಹೆಸರಾಗಿರುವವರು. ಹಲವಾರು ಸೀರಿಯಲ್ಲುಗಳಲ್ಲಿ ನಟಿಸಿದ್ದ ಅವರ ಕಾರಣದಿಂದಲೇ ಚರಿತ್ರಾಗೆ ರಂಗಭೂಮಿಯ ನಂಟು ಇತ್ತು. ಹಲವಾರು ಬೀದಿ ನಾಟಕಗಳಲ್ಲವರು ಎಳವೆಯಿಂದಲೇ ಅಭಿನಯಿಸುತ್ತಾ ಬಂದಿದ್ದರು. ಈ ಎಲ್ಲ ಅನುಭವಗಳನ್ನು ಒಟ್ಟುಗೂಡಿಸಿಕೊಂಡು ‘ಇಂಟರ್ವಲ್’ ಚಿತ್ರದ ನಾಯಕಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

 

View this post on Instagram

 

A post shared by PUBLiC TV (@publictv)

ರಾಮನಗರದ ಹಾರೋಹಳ್ಳಿ ಮೂಲಕ ಚರಿತ್ರಾ ಬಹುಮುಖ ಪ್ರತಿಭೆ. ನಿರ್ದೇಶಕ ಭರತ್ ವರ್ಷ ಮತ್ತು ಕಥೆಗಾರ ಸುಕಿ ಈ ಸಿನಿಮಾದ ಪಾತ್ರಗಳಿಗೆ ಆಡಿಷನ್ ನಡೆಸಿ, ಅದಕ್ಕೆ ಸರಿ ಹೊಂದುವ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಎಲ್ಲವೂ ರೆಡಿಯಾದರೂ ಕೂಡಾ ಚಿತ್ರೀಕರಣದ ಕಡೇ ಘಳಿಗೆಯವರೆಗೂ ನಾಯಕಿ ಪಾತ್ರವೊಂದಕ್ಕೆ ಕಲಾವಿದೆಯ ಆಯ್ಕೆ ಕಾರ್ಯ ನಡೆದಿರಲಿಲ್ಲ. ಕಡೇ ಕ್ಷಣದಲ್ಲಿ ಆಡಿಷನ್ ಮೂಲಕವೇ ಚರಿತ್ರಾಗೆ ಆ ಅವಕಾಶ ಒಲಿದು ಬಂದಿದೆ. ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಖಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್ ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಕಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಕಿ ನಿಭಾಯಿಸಿದ್ದಾರೆ. ಇದೀಗ ‘ಇಂಟರ್ವಲ್‌’ನ ಯಶದ ಯಾನ ಇಪ್ಪತೈದರಾಚೆ ಹೊರಳಿಕೊಂಡಿದೆ.

TAGGED:charithra raointerval filmsandalwoodಇಂಟರ್ವಲ್‌ ಸಿನಿಮಾಚರಿತ್ರಾ ರಾವ್‌ಶಶಿರಾಜ್‌
Share This Article
Facebook Whatsapp Whatsapp Telegram

Cinema news

Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi
kannada actor daali dhananjaya and his wife dr dhanyatha have been blessed with a baby boy
ಡಾಲಿ ಈಗ ಡ್ಯಾಡಿ – ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ
Cinema Karnataka Latest Sandalwood Top Stories
Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood

You Might Also Like

Vinay Kulkarni 1 1
Bengaluru City

ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು – ರಾಜ್ಯ ವಿಧಾನಸಭೆ ಅಧಿಕೃತ ಪ್ರಕಟಣೆ

Public TV
By Public TV
24 minutes ago
IED Blast
Latest

ನಿಷ್ಕ್ರಿಯಗೊಳಿಸುವ ವೇಳೆ ಐಇಡಿ ಸ್ಫೋಟ – ಡಿಆರ್‌ಜಿಯ 3 ಸಿಬ್ಬಂದಿ ಸಾವು

Public TV
By Public TV
33 minutes ago
Belagavi Mother theft in daughters house
Belgaum

ಮದುವೆ ಸಾಲ ತೀರಿಸಲು ಮಗಳ ಮನೆಗೆ ತಾಯಿ ಕನ್ನ – 16.57 ಲಕ್ಷ ಮೌಲ್ಯದ 110 ಗ್ರಾಂ ಚಿನ್ನ ಕಳ್ಳತನ

Public TV
By Public TV
52 minutes ago
Bowring Hospital
Bengaluru City

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ನಿಸ್ವಾರ್ಥ ಸೇವೆ ಸಲ್ಲಿಸಿದ ವೈದ್ಯರು, ಶವಾಗಾರ ಸಿಬ್ಬಂದಿಗೆ ಸನ್ಮಾನ

Public TV
By Public TV
1 hour ago
West Bengal TMC BJP Clash
Crime

ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿ – ಬಿಜೆಪಿ ನಡುವೆ ಘರ್ಷಣೆ

Public TV
By Public TV
1 hour ago
Mumbai Watermelon Death
Latest

ಮುಂಬೈ ಕುಟುಂಬದ ಸಾವಿಗೆ ಕಲ್ಲಂಗಡಿ ಕಾರಣವಲ್ಲ – ಮೃತರ ದೇಹದಲ್ಲಿ ಮಾರ್ಫಿನ್ ಅಂಶ ಪತ್ತೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?