ಬಾಲಿವುಡ್‌ನ ಸ್ಟಾರ್ ಜೋಡಿ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಸಿನಿಮಾದಲ್ಲೂ ಜೊತೆಯಾಗಿ ನಟಿಸಬೇಕು ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ಕತ್ರಿನಾ ಜೊತೆ ಸಿನಿಮಾ ಮಾಡುವ ಕುರಿತು ಎದುರಾದ ಪ್ರಶ್ನೆಗೆ ವಿಕ್ಕಿ ಕೌಶಲ್ ರಿಯಾಕ್ಟ್ ಮಾಡಿದ್ದಾರೆ. ಈ ಕುರಿತು ಇಂಟರೆಸ್ಟಿಂಗ್ ವಿಚಾರವೊಂದು ಬಿಚ್ಚಿಟ್ಟಿದ್ದಾರೆ.
ಕತ್ರಿನಾ ಜೊತೆ ಸಿನಿಮಾ ಮಾಡಲು ಎದುರು ನೋಡುತ್ತಿದ್ದೇನೆ. ಹೊಸ ಕಥೆಗಳು ಅರಸಿ ಬರುತ್ತಿವೆ. ಆದರೆ ನಾವು ಆ ಸಿನಿಮಾ ಮಾಡಬೇಕು ಎಂಬುದಕ್ಕಿಂತ ಆ ಕಥೆಯೇ ನಮ್ಮನ್ನು ಆಯ್ಕೆ ಮಾಡುವ ಹಾಗಿರಬೇಕು. ಸ್ಕ್ರಿಪ್ಟ್ ನಮ್ಮ ಜೋಡಿಯನ್ನು ಡಿಮ್ಯಾಂಡ್ ಮಾಡುವ ಹಾಗಿರಬೇಕು ಎಂದು ವಿಕ್ಕಿ ಕೌಶಲ್ ಮಾತನಾಡಿದ್ದಾರೆ. ಇದನ್ನೂ ಓದಿ:ಅಜಿತ್‌ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್- ‘ಕೆಜಿಎಫ್ 3’ಗೆ ಕನೆಕ್ಟ್ ಆಗಲಿದೆ ಈ ಚಿತ್ರ
ಅಂದಹಾಗೆ, 2 ವರ್ಷಗಳ ಡೇಟಿಂಗ್ ನಂತರ 2021ರಲ್ಲಿ ಡಿ.9ರಂದು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ ನಿಧನ
ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬ್ಯಾಡ್ ನ್ಯೂಸ್’ ಸಿನಿಮಾ ಬಳಿಕ ರಶ್ಮಿಕಾ (Rashmika Mandanna) ಜೊತೆಗಿನ ‘ಚಾವಾ’ ಸಿನಿಮಾ ರಿಲೀಸ್‌ಗೆ ವಿಕ್ಕಿ ಕೌಶಲ್ ಎದುರು ನೋಡ್ತಿದ್ದಾರೆ. ಬಯೋಪಿಕ್ ಸಿನಿಮಾ ಆಗಿರೋದ್ರಿಂದ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.