Connect with us

Latest

ಒಂದು ಬೈಕ್ ಖರೀದಿಸಿದ್ರೆ ಒಂದು ಮೇಕೆ ಫ್ರೀ, ಇದು ದೀಪಾವಳಿ ಬಂಪರ್ ಆಫರ್

Published

on

ಚೆನ್ನೈ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂಗಡಿ ಮಳಿಗೆಗಳು, ಶಾಪಿಂಗ್ ತಾಣಗಳು ಮಾರಾಟ ಹೆಚ್ಚಿಸಲು ಗ್ರಾಹಕರಿಗೆ ಸಕತ್ ಆಫರ್ ಗಳನ್ನು ನೀಡುವುದು ನಿಮಗೆ ಗೊತ್ತೆ ಇದೆ. ಆದರೆ ತಮಿಳುನಾಡಿನಲ್ಲಿ ಶೋರೂ ಒಂದು ಬೈಕ್ ಬುಕ್ ಮಾಡಿದ್ರೆ ಉಚಿತವಾಗಿ ಮೇಕೆ ನೀಡುವ ಬಂಪರ್ ಆಫರ್ ಪ್ರಕಟಿಸಿದೆ.

ಶಿವಗಂಗೆಯ ಹೀರೋ ಮೋಟೋಕಾರ್ಪ್ ಡೀಲರ್ ಒಬ್ಬರು ಈ ವಿಶೇಷ ಆಫರ್ ನ್ನು ಗ್ರಾಹಕರಿಗೆ ನೀಡಿದ್ದರು. ಈ ಆಫರ್ ಗೊತ್ತಾಗಿದ್ದೆ ತಡ ಒಂದೇ ದಿನ 100 ಕ್ಕೂ ಹೆಚ್ಚು ಮಂದಿ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬುಕ್ ಮಾಡುತ್ತಿದ್ದಂತೆ ಮೇಕೆ ಪೊರೈಸುವುದು ಹೇಗೆ ಎಂದು ತಿಳಿಯದೇ ಈಗ ಸಂಸ್ಥೆ ಮೇಕೆ ನೀಡುವ ಆಫರ್ ನಿಲ್ಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ನಾವು ವಿಶೇಷ ಈ ಆಫರ್ ನೀಡಿದ್ದೆವು. ಯಾವಾಗ ನಾವು ಆಫರ್ ಪ್ರಕಟಿಸಿದೆವೋ ಬುಕ್ಕಿಂಗ್ ಸಂಖ್ಯೆ ದಿಢೀರ್ ಹೆಚ್ಚಾಯಿತು. ಹೀಗಾಗಿ ನಾವು ಕೂಡಲೇ ಈ ಆಫರ್ ನಿಲ್ಲಿಸಿದೆವು ಎಂದು ಗಾಯತ್ರಿ ಮೋಟಾರ್ಸ್ ಅಧಿಕಾರಿಯೊಬ್ಬರು ತಿಳಿಸಿದರು.

ಈ ಆಫರ್ ಈಗ ನಿಲ್ಲಿಸಿದ್ದರೂ ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ಹೊಸ ಆಫರ್ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Click to comment

Leave a Reply

Your email address will not be published. Required fields are marked *