ಮಕ್ಕಳಿಗೆ ಸ್ಟ್ರಾಬೆರಿ ಎಂದರೆ ಇಷ್ಟ. ಸ್ಟ್ರಾಬೆರಿಗಳನ್ನು ಬಳಸಿ ಮಾಡುವ ಯಾವುದೇ ಟೇಸ್ಟಿ ತಿನಿಸಾದರೂ ಅವರು ಬೇಡ ಎನ್ನೋಕೆ ಸಾಧ್ಯವೇ ಇಲ್ಲ. ಈ ಸೀಸನ್‌ನಲ್ಲಿ ಸ್ಟ್ರಾಬೆರಿಯಿಂದ ಕಪ್‌ಕೇಕ್ ತಯಾರಿಸಿ ನಿಮ್ಮ ಮಕ್ಕಳಿಗೆ ಖಂಡಿತಾ ನೀಡಿ. ಈ ರೆಸಿಪಿಗೆ ತಾಜಾ ಸ್ಟ್ರಾಬೆರಿಯೇ ಬೇಕೆಂದೇನಿಲ್ಲ. ಫ್ರೋಝನ್ ಸ್ಟ್ರಾಬೆರಿಗಳನ್ನೂ ಬಳಸಿ ಸಿಂಪಲ್ ಆಗಿ ಕಪ್‌ಕೇಕ್ ಟ್ರೈ ಮಾಡಬಹುದು.
Advertisement
ಬೇಕಾಗುವ ಪದಾರ್ಥಗಳು:
ಮೃದುಗೊಳಿಸಿದ ಬೆಣ್ಣೆ – 125 ಗ್ರಾಂ
ಸಕ್ಕರೆ – ಕಾಲು ಕಪ್
ಮೈದಾ ಹಿಟ್ಟು – ಒಂದೂವರೆ ಕಪ್
ಹಾಲು – ಅರ್ಧ ಕಪ್
ವೆನಿಲ್ಲಾ ಸಾರ – 2 ಟೀಸ್ಪೂನ್
ಮೊಟ್ಟೆ – 2
ಕತ್ತರಿಸಿದ ಸ್ಟ್ರಾಬೆರಿ – 250 ಗ್ರಾಂ ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 180 ಡಿಗ್ರಿಗೆ ಪೂರ್ವಭಾವಿಯಾಗಿ ಕಾಯಿಸಿ.
* ಮಫಿನ್ ಟ್ರೇ ಅಥವಾ ಮೌಲ್ಡ್‌ಗೆ ಪೇಪರ್ ಕೇಸ್ ಅನ್ನು ಜೋಡಿಸಿ ಇಡಿ.
* ಒಂದು ಬಟ್ಟಲಿನಲ್ಲಿ ಮೃದುಗೊಳಿಸಿದ ಬೆಣ್ಣೆ, ಸಕ್ಕರೆ, ಹಿಟ್ಟು, ಹಾಲು, ವೆನಿಲ್ಲಾ ಸಾರ ಹಾಕಿ, ಅದಕ್ಕೆ ಮೊಟ್ಟೆಗಳನ್ನು ಒಡೆದು ಹಾಕಿ.
* ಎಲೆಕ್ಟ್ರಿಕ್ ಬೀಟರ್‌ನಿಂದ ಕಡಿಮೆ ವೇಗದಲ್ಲಿ 2 ನಿಮಿಷಗಳ ಕಾಲ ಅಥವಾ ಚೆನ್ನಾಗಿ ಮಿಶ್ರಣವಾಗುವವರೆಗೆ ಬೀಟ್ ಮಾಡಿ.
* ನಂತರ ವೇಗವನ್ನು ಹೆಚ್ಚಿಸಿ ಇನ್ನೂ 2 ನಿಮಿಷಗಳ ಕಾಲ ಅಥವಾ ನಯವಾಗುವವರೆಗೆ ಬೀಟ್ ಮಾಡಿ.
* ಕತ್ತರಿಸಿದ ಸ್ಟ್ರಾಬೆರಿಗಳನ್ನು ಅದಕ್ಕೆ ಸೇರಿಸಿ, ಮಿಶ್ರಣ ಮಾಡಿ.
* ಈಗ ಚಮಚಗಳಷ್ಟು ಮಿಶ್ರಣವನ್ನು ಕಪ್‌ಕೇಕ್ ಟ್ರೇಗೆ ಹಾಕಿ. ಮೌಲ್ಡ್‌ನ ಮುಕ್ಕಾಲು ಭಾಗಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಿ.
* ಈಗ ಅದನ್ನು ಓವನ್‌ನಲ್ಲಿ ಇರಿಸಿ, ಸುಮಾರು 20 ನಿಮಿಷಗಳ ಕಾಲ ಅಥವಾ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ.
* ಬಳಿಕ ಅದನ್ನು ಹೊರ ತೆಗೆದು ಸ್ವಲ್ಪ ತಣ್ಣಗಾಗಲು ಅನುಮತಿಸಿ.
* ಇದೀಗ ಟೇಸ್ಟಿ ಹಾಗೂ ಸಿಂಪಲ್ ಸ್ಟ್ರಾಬೆರಿ ಕಪ್‌ಕೇಕ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್‌ಕ್ರೀಮ್
Advertisement
Web Stories